ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ (Coronavirus) ರಸ್ತೆಯಿಂದ ಹಿಡಿದು ಸಂಸತ್ತಿನವರೆಗೆ ತನ್ನ ಪಾದಗಳನ್ನು ಚಾಚಿದೆ. ಕಳೆದ ಕೆಲ ದಿನಗಳ ಹಿಂದ ಸಂಸತ್ತಿನ ಅಧಿವೇಶನ ಆರಂಭಕ್ಕೂ ಮುನ್ನವೇ ಹಲವು ಸಂಸದರು ಕೊವಿಡ್ 19 ಸೋಂಕಿಗೆ ಗುರಿಯಾಗಿರುವುದರ ಕುರಿತು ಸುದ್ದಿ ಬಿತ್ತರಗೊಂಡಿತ್ತು. ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರುಟೀನ್ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಈ ಕುರಿತಾದ ಮಾಹಿತಿ ವೆಂಕಯ್ಯ ನಾಯ್ಡು ಅವರ ಉಪರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಪುಟ @VPSecretariatನಲ್ಲಿ ನೀಡಲಾಗಿದೆ.


ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೊನಾ ಧೃಢ, ಆಸ್ಪತ್ರೆಗೆ ದಾಖಲು


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ದೇಶದ ರಾಜಕೀಯಕ್ಕೆ ಸಂಬಂಧಿಸಿದ ಹಲವಾರು ದಿಗ್ಗಜರು ಕೊವಿಡ್ 19 ಸೋಂಕಿಗೆ ಗುರಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅಮಿತ್ ಷಾ, ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾನ್ ರಂತಹ ದಿಗ್ಗಜ ನಾಯಕರು ಶಾಮೀಲಾಗಿದ್ದಾರೆ.


ಇದನ್ನು ಓದಿ- ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕರೋನಾ ಪಾಸಿಟಿವ್