ಪುಣೆ: ಈ ಬಾರಿ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಪುಣೆಯ ದಗದುಷೆತ್ ಹಲ್ವಾಯಿ ಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ನೈವೇದ್ಯವಾಗಿ ಬೃಹದಾಕಾರದ ಮೋದಕವನ್ನು ತಯಾರಿಸಲಾಗಿದೆ. 


COMMERCIAL BREAK
SCROLL TO CONTINUE READING

ಕಳೆದ ಬಾರಿ 120 ಕೆ.ಜಿ ತೂಕದ ಮೋದಕ ತಯಾರಿಸಲಾಗಿತ್ತು, ಆದರೆ ಈ ಬಾರಿ 126 ಕೆ.ಜಿ. ತೂಕದ ಮೋದಕ ತಯಾರಿಸಲಾಗಿದೆ. ಈ ಮೋದಕದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ದ್ರಾಕ್ಷಿ ಮೊದಲಾದ ಡ್ರೈ ಫ್ರೂಟ್ಸ್ ಬಳಸಿ ಈ ಬೃಹದಾಕಾರದ ಆಕರ್ಷಕ ಮೋದಕ ತಯಾರಿಸಲಾಗಿದೆ. ಇದನ್ನು ನೈವೇದ್ಯಕ್ಕಿಟ್ಟು ಮಹಾ ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುವುದು. 


ದೇಶಾದ್ಯಂತ ಗಣೇಶನ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. 10 ದಿನಗಳ ಕಾಲ ಗಣೇಶನ ಮೂರ್ತಿ ಕೂರಿಸಿ, ಪೂಜಿಸಿ ಕಡೆಗೆ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.