ನವದೆಹಲಿ: ದೇಶದ ಅತಿದೊಡ್ಡ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ನಿತಾ ಅಂಬಾನಿ ದಂಪತಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ವಿವಾಹ ಸದ್ಯದಲ್ಲೇ ನಡೆಯಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಈ ಜೋಡಿಯ ಸ್ವರ್ಣ ಖಚಿತ ವೆಡ್ಡಿಂಗ್ ಕಾರ್ಡ್ ಸಿದ್ಧವಾಗಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಇಶಾ ಅಂಬಾನಿ ಮತ್ತು ಆನಂದ್ ವಿವಾಹದ ಸುದ್ದಿ ಸಾಕಷ್ಟು ಸೌಂಡ್ ಮಾಡಿತ್ತು. ಈಗ ಅವರ ವೆಡ್ಡಿಂಗ್ ಕಾರ್ಡ್ ರೆಡಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಈ ವೆಡ್ಡಿಂಗ್ ಕಾರ್ಡ್ ಎರಡು ಭಾಗಗಳಲ್ಲಿದ್ದು, ಮೊದಲ ಬಾಕ್ಸ್ ಮೇಲೆ ಇಶಾ ಮತ್ತು ಆನಂದ್ ಹೆಸರಿನ ಮೊದಲ ಅಕ್ಷರ(ia)ಗಳನ್ನು ಬರೆಯಲಾಗಿದೆ. ಎರಡನೇ ಬಾಕ್ಸ್ ಒಳಗೆ ನಾಲ್ಕು ಪುಟ್ಟ ಪುಟ್ಟ ಬಾಕ್ಸ್ ಗಳಿದ್ದು, ಅದರಲ್ಲಿ ದೇವಿ ಸರಸ್ವತಿಯ ಫೋಟೋ ಇರಿಸಲಾಗಿದೆ. 



ಈ ಕಾರ್ಡ್ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಶೇರ್ ಆಗಿದೆ. ವಿವಾಹ ಕರೆಯೋಲೆಯ ಬಾಕ್ಸ್ ಅನ್ನು ಸುಂದರವಾಗಿ, ವರ್ಣರಂಜಿತವಾಗಿ ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. ಮೂಲಗಳ ಪ್ರಕಾರ, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಶ್ರೀ ಸಿದ್ದಿವಿನಾಯಕನ ದೇವಸ್ಥಾನಕ್ಕೆ ತೆರಳಿ ಮೊದಲ ವೆಡ್ಡಿಂಗ್ ಕಾರ್ಡ್ ಇಟ್ಟು ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ. 



ಸೆಪ್ಟೆಂಬರ್ ತಿಂಗಳಲ್ಲಿ ಈಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ನಿಶ್ಚಿತಾರ್ಥ ಇಟಲಿಯಲ್ಲಿ ನೆರವೇರಿತ್ತು. ಮೂರು ದಿನಗಳ ಕಾಲ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಷ್ಟೇ ಅಲ್ಲದೆ, ದೇಶ ವಿದೇಶಗಳಿಂದ ಗಣ್ಯರು ಆಗಮಿಸಿದ್ದರು.