ಒಡಿಶಾ: ಹಾವು ಮೊಟ್ಟೆ ಇಡುವುದನ್ನು ಯಾರಾದರೂ ನೋಡಿದ್ದೀರಾ? ಅಂತಹ ಒಂದು ಅಪರೂಪದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಒಡಿಶಾದ ಭುವನೇಶ್ವರದ ಮನೆಯೊಂದರಲ್ಲಿ ಹಾವೊಂದು 28 ಮೊಟ್ಟೆಗಳನ್ನು ಇಟ್ಟಿದೆ. ಭಾರತೀಯ ಉಪಖಂಡದಲ್ಲಿ ಕಂಡುಬರುವ ನಾಲ್ಕು ವಿಷಯುಕ್ತ ಹಾವಿನ ಜಾತಿಗಳಲ್ಲಿ ಭಾರತೀಯ ನಾಗರ (Cobra) ಒಂದಾಗಿದೆ. ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಒಂದು ಮನೆಯಲ್ಲಿ ರಕ್ಷಿಸಲಾಗಿದ್ದ ಹಾವೊಂದು ಮೊಟ್ಟೆ ಇಡುವುದನ್ನು ವೀಡಿಯೋ ಮಾಡಲಾಗಿದೆ. ಈ ಹಾವು ಒಂದರ ನಂತರ ಒಂದು... ಒಟ್ಟು 28 ಮೊಟ್ಟೆಗಳನ್ನು ಇಟ್ಟಿದ್ದು, ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಅದನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಈ ವೀಡಿಯೋ ಜೀ ವಾಹಿನಿಗೆ ದೊರೆತಿದೆ.