ಅರವಲ್ಲಿ (ಗುಜರಾತ್): ಗುಜರಾತ್ ನ ಅರವಲ್ಲಿ ಜಿಲ್ಲೆಯಿಂದ ಬೆಚ್ಚಿಬೀಳುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮೊಡಾಸಾ ಪಟ್ಟಣದಲ್ಲಿ ಹಾಡು ಹಗಲೇ ಯುವತಿಯ ಅಪಹರಣ ಮಾಡಲಾಗಿದ್ದು, ಪಟ್ಟಣದಲ್ಲಿ ಭೀತಿಯ ವಾತಾವರಣ ಮನೆಮಾಡಿದೆ. ಇಂದು ಬೆಳಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಕೆಲ ಜನರು ಯುವತಿಯೋರ್ವಳನ್ನು ಅಪಹರಿಸಿದ್ದಾರೆ. ಸದ್ಯ ಈ ಘಟನೆಯ ಕುರಿತಾದ ಸಿಸಿಟಿವಿ ವಿಡಿಯೋ ಕೂಡ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING


ಮಂಗಳವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ನಗರದ ಕಾಲೇಜು ರಸ್ತೆಯ ಮೇಲೆ ಬಿಳಿ ಬಣ್ಣದ ಕಾರೊಂದು ಬಂದು ನಿಂತಿದೆ. ಈ ಕಾರಿನಿಂದ ಕೆಳಗಿಳಿದ ಕೆಲ ಜನರು ರಸ್ತೆಯ ಪಕ್ಕದಲ್ಲಿ ತನ್ನ ಸ್ನೇಹಿತೆಯ ಜೊತೆಗೆ ನಿಂತಿದ್ದ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಪರಾರಿಯಾಗಿದ್ದಾರೆ. ಯುವತಿ ಮಾಲಾಪುರ್ ತಾಲೂಕು ನಿವಾಸಿಯಾಗಿದ್ದು ಕಾಲೇಜಿನಲ್ಲಿ ಕಾಮರ್ಸ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ.


ಸದ್ಯ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸುವ ಸಿಸಿಟಿವಿ ಫೂಟೇಜ್ ಬೆಳಕಿಗೆ ಬಂದಿದೆ. ಘಟನೆಯ ವೇಳೆ ಯುವತಿಯ ಸ್ನೇಹಿತೆ ಕೂಡ ಆಕೆಯ ಜೊತೆಗಿದ್ದಳು ಎನ್ನಲಾಗಿದೆ. ಯುವತಿಯ ಕಿರುಚಾಟ ಕೇಳಿ ಅಕ್ಕಪಕ್ಕದ ಜನರು ಅಲ್ಲಿ ನೆರೆದಿದ್ದಾರೆ. ಘಟನೆಯ ವೇಳೆ ಅಲ್ಲಿದ್ದ ಕೆಲ ಜನರು ಕಾರನ್ನು ಸಹ ಬೆನ್ನಟ್ಟಿದ್ದಾರೆ. ಆದರೆ ಈ ವೇಳೆ ಅಪಹರಣಕಾರರು ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪಹರಣಕರ್ತರು ಹಾಗೂ ಯುವತಿಯ ಕುರಿತು ಯಾವುದೇ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.