Video: ಅನೌಪಚಾರಿಕ ಶೃಂಗಸಭೆಗೂ ಮುನ್ನ ಸ್ವಚ್ಛತಾ ರಾಯಭಾರಿಯಾದ ಮೋದಿ..!
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಎರಡನೇ ಸುತ್ತಿನ ಅನೌಪಚಾರಿಕ ಶೃಂಗಸಭೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಎರಡನೇ ಸುತ್ತಿನ ಅನೌಪಚಾರಿಕ ಶೃಂಗಸಭೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.
ಮಮಲ್ಲಾಪುರದ ಬೀಚ್ ಹತ್ತಿರ ಸುಮಾರು 30 ನಿಮಿಷಗಳಲ್ಲಿ ಪ್ರಧಾನಿ ಮೋದಿ ಸ್ವಚ್ಛತಾ ಕಾರ್ಯದ ಜೊತೆಗೆ ವ್ಯಾಯಾಮದಲ್ಲಿ ಭಾಗವಹಿಸಿದರು.ಇದಾದ ನಂತರ ತಮ್ಮ ಬೆಳಗಿನ ಈ ಕಾರ್ಯದ ಬಗ್ಗೆ ಟ್ವೀಟ್ ಮಾಡಿರುವ ಮೋದಿ 'ಇಂದು ಬೆಳಿಗ್ಗೆ ಮಾಮಲ್ಲಾಪುರದ ಬೀಚ್‌ನಲ್ಲಿ ಪ್ಲಾಗಿಂಗ್( ವ್ಯಾಯಾಮದ ಜೊತೆಗೆ ಕಸ ಸಂಗ್ರಹ ಕಾರ್ಯ) 30 ನಿಮಿಷಗಳ ಕಾಲ ನಡೆಯಿತು. ನನ್ನ ಕಸದ ಸಂಗ್ರಹಣೆಯನ್ನು ಹೋಟೆಲ್ ಸಿಬ್ಬಂದಿಯಾಗಿರುವ ಜಯರಾಜ್ ಅವರಿಗೆ ಹಸ್ತಾಂತರಿಸಿದೆ.ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ ಮತ್ತು ಅಚ್ಚುಕಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳೋಣ! ನಾವು ಸದೃಡವಾಗಿ ಮತ್ತು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳೋಣ ಎಂದು ಮೋದಿಯವರು ಬೀಚ್ ಸ್ವಚ್ಚಗೊಳಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ಲಾಗಿಂಗ್ ಎನ್ನುವುದು ಜಾಗಿಂಗ್ ಮೂಲಕ ಕಸವನ್ನು ಸಂಗ್ರಹಿಸುವ ವ್ಯಾಯಾಮವಾಗಿದೆ. ಪ್ರಧಾನಿ ಮೋದಿ ಈ ಹಿಂದೆ ಈ ವ್ಯಾಯಾಮದ ಪರವಾಗಿ ಮಾತನಾಡಿದ್ದರು, ಇದು ದೇಹವನ್ನು ಆರೋಗ್ಯವಾಗಿರಿಸುವುದಲ್ಲದೆ ಪರಿಸರಕ್ಕೆ ಸಹಾಯ ಮಾಡುತ್ತದೆ. ಸೆಪ್ಟೆಂಬರ್ 29 ರಂದು ತಮ್ಮ ಮಾಸಿಕ 'ಮನ್ ಕಿ ಬಾತ್' ರೇಡಿಯೊ ಭಾಷಣದಲ್ಲಿ, ಅಕ್ಟೋಬರ್ 2 ರಿಂದ ದೇಶಾದ್ಯಂತ ಪ್ಲಾಗಿಂಗ್ ಅನ್ನು ಉತ್ತೇಜಿಸಲು ಸರ್ಕಾರವು ಎರಡು ಕಿ.ಮೀ ಉದ್ದದ ಮ್ಯಾರಥಾನ್ ನ್ನು ಆಯೋಜಿಸಲಿದೆ ಎಂದು ಪ್ರಧಾನಿ ಹೇಳಿದ್ದರು.
ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಅನೌಪಚಾರಿಕ ಮಾತುಕತೆಗಾಗಿ ಮೋದಿ ಮಾಮಲ್ಲಾಪುರದಲ್ಲಿದ್ದಾರೆ. ಉಭಯ ನಾಯಕರು ಇಂದು ತಮ್ಮ ಅನೌಪಚಾರಿಕ ಶೃಂಗಸಭೆಯ ಎರಡನೇ ಸುತ್ತನ್ನು ನಡೆಸುತ್ತಿದ್ದಾರೆ, ನಂತರ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ.