VIDEO: ಕಾರ್ಯಕ್ರಮವೊಂದರಲ್ಲಿ ಹೆಜ್ಜೆ ಹಾಕಿ ನೃತ್ಯ ಮಾಡಿದ್ದ ವಾಜಪೇಯಿ!
ದೇಶ ಕಂಡ ಅಪರೂಪದ ಪ್ರಧಾನಿ ವಾಜಪೇಯಿ ಅವರು ಹೋಳಿ ಹಬ್ಬದಂದು ಬಣ್ಣ ಹಚ್ಚಿಕೊಂಡು ಜನಸಾಮಾನ್ಯರೊಂದಿಗೆ ಕುಣಿಯುತ್ತಿರುವ ಅಪರೂಪದ ವೀಡಿಯೋ!
ನವದೆಹಲಿ: ಮಾಜಿ ಪ್ರಧಾನಿ ಹಾಗೂ ದೇಶ ಕಂಡ ಅಪ್ರತಿಮಾ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಗುರವಾರ ಸಂಜೆ 5 ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ. ಆದರೆ ಅವರು ಪ್ರಧಾನಿಯಾಗಿ, ಮಂತ್ರಿಯಾಗಿ, ಓರ್ವ ಕಾರ್ಯಕರ್ತನಾಗಿ ದೇಶಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಅವರೊಬ್ಬ ಉತ್ತಮ ವಾಗ್ಮಿ, ರಾಜಕಾರನಿಯಷ್ಟೇ ಅಲ್ಲ, ಕವಿಯೂ ಆಗಿದ್ದರು.
ಅಂತಹ ದೇಶ ಕಂಡ ಅಪರೂಪದ ಪ್ರಧಾನಿ ವಾಜಪೇಯಿ ಅವರು ಹೋಳಿ ಹಬ್ಬದಂದು ಬಣ್ಣ ಹಚ್ಚಿಕೊಂಡು ಜನಸಾಮಾನ್ಯರೊಂದಿಗೆ ಕುಣಿಯುತ್ತಿರುವ ಅಪರೂಪದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ಆ ವೀಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ. ಇದು ವಾಜಪೇಯಿ ಅವರ ಸರಳತೆಗೆ ಹಿಡಿದ ಕನ್ನಡಿಯಂತಿದೆ.