Video:ಹಾಡಿಗೆ ಮನಸೋತ ಅಭಿಮಾನಿ, ಗಾಯಕಿ ಮೇಲೆ ಬಕೆಟ್ ಗಟ್ಟಲೆ ನೋಟು ಸುರಿದ ಫ್ಯಾನ್
ಜಾನಪದ ಗಾಯಕಿ ಊರ್ವಶಿ ರಾಡಾಡಿಯಾ ಅವರು ವೇದಿಕೆಯ ಮೇಲೆ ಹಾಡು ಹಾಡುತ್ತಿದ್ದಂತೆ, ವೇದಿಕೆಗೆ ಬಂದ ಅವರ ಅಭಿಮಾನಿಯೊಬ್ಬರು ಬಕೆಟ್ ತುಂಬಾ ನೋಟು ತಂದು ಗಾಯಕಿಯ ಮೇಲೆ ಸುರಿಸಿದ್ದಾರೆ.
ನವದೆಹಲಿ : ನಮ್ಮ ದೇಶದಲ್ಲಿ ಕಲಾವಿದರಿಗೂ ಕೊರತೆಯಿಲ್ಲ, ಕಲೆಯ ಆರಾಧಕರಿಗೂ ಕಡಿಮೆಯಿಲ್ಲ. ದೇಶದೆಲ್ಲೆಡೆ ಕಲಾಭಿಮಾನಿಗಳನ್ನು ನಾವು ನೋಡಬಹುದು. ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ ಅವರಿಂದ ಹಿಡಿದು ಜುಬಿನ್ ನೌಟಿಯಾಲ್ ವರೆಗೆ ಅನೇಕ ಗಾಯಕರು ದೇಶದಲ್ಲಿ ಅಪಾರ ಪ್ರೀತಿ ಅಭಿಮಾನವನ್ನು ಪಡೆದಿದ್ದಾರೆ. ಇನ್ನು ಬಾಲಿವುಡ್ ಗಾಯಕರು (Bollywood Singer) ಮಾತ್ರವಲ್ಲ ತಮ್ಮ ಮಧುರ ಕಂಠದಿಂದ ಅಭಿಮಾನಿಗಳ ಮನಗೆದ್ದ ಅದೆಷ್ಟೋ ಜಾನಪದ ಗಾಯಕರು (Folk Singer) ಕೂಡಾ ನಮ್ಮ ನಡುವೆ ಇದ್ದಾರೆ. ಜಾನಪದ ಗಾಯಕಿ ಊರ್ವಶಿ ರಾಡಿಯಾ Urvashi raddiya) ಅವರು ವೇದಿಕೆಯ ಮೇಲೆ ಹಾಡು ಹಾಡುತ್ತಿದ್ದಂತೆ, ವೇದಿಕೆಗೆ ಬಂದ ಅವರ ಅಭಿಮಾನಿಯೊಬ್ಬರು ಬಕೆಟ್ ತುಂಬಾ ನೋಟು ತಂದು ಗಾಯಕಿಯ ಮೇಲೆ ಸುರಿಸಿದ್ದಾರೆ.
ಗಾಯಕಿಯ ಕಂಠಕ್ಕೆ ಅಭಿಮಾನಿಯ ಮೆಚ್ಚುಗೆ :
ಈ ವಿಡಿಯೋದಲ್ಲಿ ಗುಜರಾತಿ ಗಾಯಕಿ ಊರ್ವಶಿ ರಾಡಿಯಾ (Urvashi raddiya)ವೇದಿಕೆಯ ಮೇಲೆ ಕುಳಿತು ಸ್ತೋತ್ರವನ್ನು ಪಠಿಸುತ್ತಿರುವುದನ್ನು ನೋಡಬಹುದು. ಗಾಯಕಿ ಊರ್ವಶಿ, ಭಜನೆಗಳನ್ನು ಹಾಡಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಅವರ ಗಾಯನಕ್ಕೆ ಆಕರ್ಷಿತರಾದ ಅಭಿಮಾನಿಯೊಬ್ಬರು, ಬಕೆಟ್ ತುಂಬಾ ನೋಟುಗಳನ್ನು ಹಿಡಿದು ವೇದಿಕೆಯ ಮೇಲೆ ಬರುತ್ತಾರೆ. ಗಾಯಕಿ ಹಾಡುತ್ತಿದ್ದಂತೆಯೇ ಅವರ ಮೇಲೆ ನೋಟಿನ (Note) ಮಳೆಗರೆಯುತ್ತಾರೆ. ಗಾಯಕಿ ಸಂಪೂರ್ಣ ನೋಟಿನಿಂದ ಮುಚ್ಚಲ್ಪಡುವುದನ್ನು ಇಲ್ಲಿ ಕಾಣಬಹುದು.
ಇದನ್ನೂ ಓದಿ : Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನನ್ನು ಎಳೆದಾಡಿ ಥಳಿಸಿದ ಮಹಿಳೆ, ವಿಡಿಯೋ ವೈರಲ್
ಅಸಲಿ ನೋಟು :
ಈ ವಿಡಿಯೋವನ್ನು ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಶೇರ್ ಮಾಡಿದ್ದಾರೆ. ಊರ್ವಶಿ ರಾಡಿಯಾ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಅವರ ಪ್ರತೀ ಶೋನಲ್ಲಿ ಅಭಿಮಾನಿಗಳಿಂದ ಇಂಥ ಪ್ರತಿಕ್ರಿಯೆ ಸಿಗುತ್ತದೆ. ಹೀಗೆ ತನ್ನ ಲೈವ್ ಶೋ (Live show) ವೇಳೆ ಅಭಿಮಾನಿಗಳು ನೀಡುವ ಹಣವನ್ನು ಊರ್ವಶಿ ರಾಡಿಯಾ ಅವರು, ಮದುವೆ ಮತ್ತು ಬಡ ಹೆಣ್ಣು ಮಕ್ಕಳಿಗಾಗಿ ಖರ್ಚು ಮಾಡುತ್ತಾರೆ..
ಅಭಿಮಾನಿಗಳ ಪ್ರೀತಿಗೆ ಧನ್ಯವಾದ :
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social media) ಭಾರೀ ವೈರಲ್ (Viral video) ಆಗುತ್ತಿದೆ. ಇದಕ್ಕೂ ಮೊದಲು, ಗಾಯಕಿ ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ತೋರಿದ ಬೆಲೆಕಟ್ಟಲಾಗದ ಪ್ರೀತಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ : Viral Video: ಹಾಡಹಗಲೇ ಬೈಕ್ ಗೆ ಅಡ್ಡಬಂದ ಚಿರತೆ, ಆಮೇಲೇನಾಯ್ತು ನೋಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.