VIDEO: ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಕೆನಡಾ ಪ್ರಧಾನಿ ಕುಟುಂಬ
ಅಹಮದಾಬಾದ್ ಭೇಟಿಯ ಸಮಯದಲ್ಲಿ, ಟ್ರುಡೊ ಕುಟುಂಬದವರು ಸಾಂಪ್ರದಾಯಿಕ ಭಾರತೀಯ ವೇಷಭೂಷಣಗಳನ್ನು ಧರಿಸಿದ್ದರು.
ಅಹ್ಮದಾಬಾದ್: ಭಾರತದ ಪ್ರವಾಸದಲ್ಲಿರುವ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಮತ್ತು ಕುಟುಂಬ ಸಾಂಪ್ರದಾಯಿಕ ಭಾರತೀಯ ಉಡುಗೆ ತೊಟ್ಟು ಇಂದು ಅಹ್ಮದಾಬಾದ್ ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು.
ಅಹಮದಾಬಾದ್ ಭೇಟಿಯ ಸಮಯದಲ್ಲಿ ಜಸ್ಟಿನ್ ಟ್ರುಡೋ ಪತ್ನಿ ಸೋಫಿಯಾ ಸಾರಿ ಮತ್ತು ಮಕ್ಕಳು ನೂಲುವ ಚಕ್ರದ(ಚರಕದ) ಓಟವನ್ನು ಕಂಡರು. ಸಬರಮತಿ ಆಶ್ರಮದಿಂದ ಹೊರಟ ಟ್ರುಡೋ ದಂಪತಿ ನೇರವಾಗಿ ಅಕ್ಷರಧಾಮ ದೇವಾಲಯಕ್ಕೆ ಹೋದರು ಮತ್ತು ಅದರ ವೈಭವವನ್ನು ನೋಡಿ ಆಶ್ಚರ್ಯಚಕಿತರಾದರು.