ನವದೆಹಲಿ: ಶತಕೋಟ್ಯಾಧಿಪತಿ, ಭಾರತದ ನಂ.1 ಉದ್ಯಮಿ ಮುಖೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಅವರ ವಿವಾಹ ಖ್ಯಾತ ಉದ್ಯಮಿ ದಂಪತಿ ಅಜೆಯ್ ಪಿರಮಾಳಾ ಹಾಗೂ ಸ್ವಾತಿ ಪಿರಮಾಳ್ ಅವರ ಪುತ್ರ ಆನಂದ್ ಪಿರಮಾಳ್ ಅವರೊಂದಿಗೆ ಡಿಸೆಂಬರ್ 12ರಂದು ನಡೆಯಲಿದೆ. 


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಉದಯಪುರದ ಒಬೆರಾಯ್ ಉದಯ್ ವಿಲ್ಲಾ ಮತ್ತು ಸಿಟಿ ಪ್ಯಾಲೇಸ್ ನಲ್ಲಿ  ವಿವಾಹ ಪೂರ್ವ ಕಾರ್ಯಕ್ರಮಗಳು ಬಹಳ ಸಡಗರದಿಂದ ನಡೆಯುತ್ತಿವೆ. ಬಾಲಿವುಡ್ ತಾರೆಯರೂ ಸೇರಿದಂತೆ ಪ್ರಪಂಚದಾದ್ಯಂತದ ಬಹಳಷ್ಟು ಗಣ್ಯರು ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದಾರೆ. 


ಭಾನುವಾರ ಸಂಜೆ ನಡೆದ ವಿವಾಹಪೂರ್ವ ಔತಣಕೂಟದಲ್ಲಿ ಅಂಬಾನಿ ಕುಟುಂಬದ ಸದಸ್ಯರೆಲ್ಲರೂ ಹಾಡಿಗೆ ಹೆಜ್ಜೆ ಹಾಕಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನಿತಾ ಅಂಬಾನಿ ತಮ್ಮ ಪುತ್ರರಾದ ಆಕಾಶ್ ಮತ್ತು ಅನಂತ ಅಂಬಾನಿ ಜೊತೆ ಡ್ಯಾನ್ಸ್ ಮಾಡಿದರು. ಅಷ್ಟೇ ಅಲ್ಲ, ಮುಖೆ ಅಂಬಾನಿ ಮತ್ತು ನಿತಾ ಅಂಬಾನಿ 'ಜಬ್ ತಕ್ ಹೇ ಜಾನ್' ಟೈಟಲ್ ಸಾಂಗ್ ಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದೆ.


ಬಾಲಿವುಡ್ ತಾರೆಯರಾದ ಶಾರೂಕ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಕೂಡ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು. ಆದರೆ ಈ ಎಲ್ಲದರ ನಡುವೆ ಅತಿಥಿಗಳ ಗಮನ ಸೆಳೆದಿದ್ದು, ಇಶಾ ಅಂಬಾನಿ ಡ್ಯಾನ್ಸ್! ತನ್ನ ಭಾವಿ ಮತಿ ಆನಂದ್ ಪಿರಾಮಾಲ್ ಗೋಸ್ಕರ ಇಷಾ ಅಂಬಾನಿ ಈ ಹಾಡನ್ನು ಡೆಡಿಕೇಟ್ ಮಾಡುತ್ತಾ ರೊಮ್ಯಾಂಟಿಕ್ಕಾಗಿ ಹಾಡಿಗೆ ಡ್ಯಾನ್ಸ್ ಮಾಡಿರುವುದೀಗ ಸಖತ್ ವೈರಲ್ ಆಗಿದೆ.