Gujarat Election 2022 : ಗುಜರಾತ್ ಚುನಾವಣೆ : ಕಾಂಗ್ರೆಸ್ - ಬಿಜೆಪಿ ನಡುವೆ ಶುರುವಾಗಿದೆ `ವೀಡಿಯೋ ವಾರ್`
Gujarat Assembly Election 2022 : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಇದೀಗ ಆಕ್ಷೇಪಾರ್ಹ ಹೇಳಿಕೆಗಳ `ವೀಡಿಯೋ ವಾರ್` ಶುರುವಾಗಿದೆ. ಇದೀಗ ಎರಡೂ ಪಕ್ಷಗಳು ವಿಡಿಯೊ ಬಿಡುಗಡೆ ಮಾಡುವ ಮೂಲಕ ಪರಸ್ಪರ ವಾಗ್ದಾಳಿ ನಡೆಸುತ್ತಿವೆ.
Gujarat Assembly Election 2022 : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಇದೀಗ ಆಕ್ಷೇಪಾರ್ಹ ಹೇಳಿಕೆಗಳ 'ವೀಡಿಯೋ ವಾರ್' ಶುರುವಾಗಿದೆ. ಇದೀಗ ಎರಡೂ ಪಕ್ಷಗಳು ವಿಡಿಯೊ ಬಿಡುಗಡೆ ಮಾಡುವ ಮೂಲಕ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ನಾಯಕರ ಆಕ್ಷೇಪಾರ್ಹ ಹೇಳಿಕೆಗಳ ವಿಡಿಯೋವನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ. ಮತ್ತೊಂದೆಡೆ, ಕಾಂಗ್ರೆಸ್ ಕೂಡ ತಡಮಾಡದೆ, ಸ್ವಲ್ಪ ಸಮಯದ ನಂತರ ಪ್ರಧಾನಿ ಮೋದಿಯವರ ಆ ಹೇಳಿಕೆಗಳನ್ನು ವೀಡಿಯೊ ರೂಪದಲ್ಲಿ ವಿವಾದಾತ್ಮಕವಾಗಿ ಹಂಚಿಕೊಂಡಿದೆ.
ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾವಣ’ ಎಂದು ಟೀಕಿಸಿದ ನಂತರ ಮಂಗಳವಾರದಿಂದ ಆಡಳಿತ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷದ ನಡುವೆ ಹೊಸ ರಾಜಕೀಯ ಯುದ್ಧ ಪ್ರಾರಂಭವಾಯಿತು.
ಇದನ್ನೂ ಓದಿ : Shocking News: ಓಡಿಹೋಗಿದ್ದ ಆಂಟಿ-ಯುವಕ ಶವವಾಗಿ ಪತ್ತೆ..!
ಖರ್ಗೆ ಹೇಳಿದ್ದೇನು?
ಅಹಮದಾಬಾದ್‌ನ ಬೆಹ್ರಾಂಪುರದಲ್ಲಿ ಸೋಮವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ ಅವರು, ಮುನ್ಸಿಪಲ್ ಸಂಸ್ಥೆಗಳು, ಮುನ್ಸಿಪಲ್ ಕಾರ್ಪೊರೇಷನ್‌ಗಳು ಮತ್ತು ರಾಜ್ಯ ವಿಧಾನಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ‘ಮೋದಿ ಇಲ್ಲಿಗೆ ಬಂದು ಪುರಸಭೆ ಕೆಲಸ ಮಾಡುತ್ತಾರಾ? ಮೋದಿಯವರು ಇಲ್ಲಿಗೆ ಬಂದು ನಿಮಗೆ ಕಷ್ಟದಲ್ಲಿ ಸಹಾಯ ಮಾಡುತ್ತಾರೆಯೇ? ಅರೇ, ನೀವು ಪ್ರಧಾನಿ. ನಿಮಗೆ ಟಾಸ್ಕ್ ನೀಡಲಾಗಿದೆ. ಆ ಕೆಲಸ ಮಾಡು.
ವಿಡಿಯೋದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ, ಎಂಎಲ್ ಎ ಚುನಾವಣೆ... ಎಂಪಿ ಚುನಾವಣೆ... ಹೀಗೆ ಪ್ರಧಾನಿಯಾಗಬೇಕು ಎಂಬ ಆಸೆಯಿಂದ... ಆದರೆ ಎಲ್ಲ ಸಮಯದಲ್ಲೂ ಅವರು ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ವೋಟ್ ಮಾಡಿ ಅಣ್ಣಾ ನಿಮ್ಮ ಮುಖ ಎಷ್ಟು ಬಾರಿ ನೋಡಿದ್ದೀರಿ. ಮಹಾನಗರ ಪಾಲಿಕೆಯಲ್ಲೂ ನಿನ್ನ ಮುಖ ನೋಡಿ, ಎಂಎಲ್‌ಎ ಎಲೆಕ್ಷನ್‌ನಲ್ಲೂ ನಿನ್ನ ಮುಖ... ಎಂಪಿ ಎಲೆಕ್ಷನ್‌ನಲ್ಲೂ ನಿನ್ನ ಮುಖ... ಎಲ್ಲೆಲ್ಲೂ... ಎಷ್ಟು ಅಣ್ಣಂದಿರು... ನಿನಗೆ ರಾವಣನಂತ ನೂರು ಮುಖಗಳಿವೆಯೇ. ಏನಿದು?...ನನಗೆ ಅರ್ಥವಾಗುತ್ತಿಲ್ಲ.' ಎಂದು ಹೇಳಿದ್ದಾರೆ.
ಬಿಜೆಪಿ ಗುರಿಯಾಗಿಸಿದ : ಸಿಎಂ ಪಟೇಲ್
ಈ ಟೀಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಎಂ ಪಟೇಲ್ ಟ್ವೀಟ್ ನಲ್ಲಿ, “ಯಾವುದೇ ಅಭಿವೃದ್ಧಿ ಅಜೆಂಡಾ ಮತ್ತು ಜನರ ಬೆಂಬಲವಿಲ್ಲದೆ, ಕಾಂಗ್ರೆಸ್ ಗುಜರಾತ್ ಮತ್ತು ಗುಜರಾತಿಗಳನ್ನು ನಿಂದಿಸಲು ಮುಂದಾಗಿದೆ,” ನೀಡಿರುವ ಹೇಳಿಕೆಯು ಗುಜರಾತಿಗಳ ಮೇಲಿನ ಅವರ ದ್ವೇಷಕ್ಕೆ ಸಾಕ್ಷಿಯಾಗಿದೆ. ಇಂತಹ ವರ್ತನೆಯಿಂದ ಈ ಬಾರಿಯೂ ಗುಜರಾತ್ ಜನತೆ ಅವರನ್ನು ತಿರಸ್ಕರಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಆಡಳಿತವಿರುವ ಗುಜರಾತ್‌ನ 182 ಸದಸ್ಯ ಬಲದ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ : Girl Dance Video: ಅಕ್ಕನ ಮದುವೆಯಲ್ಲಿ ತಂಗಿಯ ಅದ್ಭುತ ನೃತ್ಯ! ಯುವಕರ ಮನಸೆಳೆದ ಸುಂದರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.