ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವಕರು ರಸ್ತೆಯಲ್ಲಿ ವಾಹನಗಳೊಂದಿಗೆ ಸ್ಟಂಟ್ ಮಾಡುತ್ತಿರುವ ವೀಡಿಯೋಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ ಯುವಕನೊಬ್ಬ ವೇಗವಾಗಿ ಚಲಿಸುವ ಕಾರಿನ ಹಿಂದೆ ಸ್ಕೇಟಿಂಗ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 



COMMERCIAL BREAK
SCROLL TO CONTINUE READING

ಈ ವೀಡಿಯೋವನ್ನು ನವದೆಹಲಿಯ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಚಿತ್ರೀಕರಿಸಲಾಗಿದೆ. ಆದರೆ ಯಾರು ಮತ್ತು ಯಾವಾಗ ಮಾಡಲಾಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಸದ್ಯ ಇಂತಹ ಅಪಾಯಕಾರಿ ಮತ್ತು ಪ್ರಚೋದನಾಕಾರಿ ಸ್ಟಂಟ್ ಮಾಡಿದವರನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.