ನವದೆಹಲಿ: ಉತ್ತರ ಭಾರತದ  ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಶನಿವಾರ ಬೆಳಗ್ಗೆ ಹಿಮಪಾತ ಸಂಭವಿಸಿದೆ.


COMMERCIAL BREAK
SCROLL TO CONTINUE READING

ಜಮ್ಮು ಮತ್ತು ಕಾಶ್ಮೀರದಲ್ಲಿ ಬೇಸಿಗೆ ರಾಜಧಾನಿಯಾದ ಶ್ರೀನಗರವು ಋತುವಿನ ಮೊದಲ ಹಿಮಪಾತ ಸಂಭವಿಸಿತು."ಕಳೆದ 12 ಗಂಟೆಗಳಲ್ಲಿ ಜೋಜಿಲಾ ಪಾಸ್, ಡ್ರಾಸ್, ಕಾರ್ಗಿಲ್, ಸೋನಾಮಾರ್ಗ್, ಪಹಲ್ಗಾಂ, ಗಂದರ್ಬಲ್ ಮತ್ತು ಗುಲ್ಮಾರ್ಗ್ಗಳಲ್ಲಿ  ಹಿಮಪಾತ ಸಂಭವಿಸಿದೆ" ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 



ಈ ಅವಧಿಯಲ್ಲಿ ಕಣಿವೆಯ ಬಯಲು ಮತ್ತು ಜಮ್ಮುವಿಭಾಗದಲ್ಲಿ ಮಳೆಯು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.ಗುಲ್ಮಾರ್ಗ್ ಮತ್ತು ಪಹಲ್ಗಾಂ ಪ್ರದೇಶಗಳಲ್ಲಿ ಹಿಮಪಾತದಿಂದಾಗಿ ಪ್ರವಾಸಿಗರು ಉತ್ಸುಕರಾಗಿದ್ದರು.ಹವಾಮಾನ ಇಲಾಖೆಯ ವರದಿಯಂತೆ  ಶ್ರೀನಗರದ ಕನಿಷ್ಠ ತಾಪಮಾನವು 1.8 ಡಿಗ್ರಿ ಸೆಲ್ಷಿಯಸ್, ಪಹಲ್ಗಾಂ ಮತ್ತು ಗುಲ್ಮಾರ್ಗ್ನಲ್ಲಿ 0.4 ಮತ್ತು ಮೈನಸ್ 3.0 ಆಗಿತ್ತು. ಲೇಹ್ ಪಟ್ಟಣವು 0.4 ಅನ್ನು ದಾಖಲಿಸಿದೆ, ಕಾರ್ಗಿಲ್ ಶನಿವಾರ ನಗರದ ಅತ್ಯಂತ ತಗ್ಗಿನ ಪಟ್ಟಣದಲ್ಲಿ ಮೈನಸ್ 4.8 ರಷ್ಟಿದೆ. 



ಜಮ್ಮು ನಗರವು 16.2 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ, ಅದೇ ರೀತಿಯಾಗಿ ಕತ್ರಾ 14.2, ಬಟಾಟ್ 5.5, ಬನ್ನಿಹಾಲ್ 6.1 ಮತ್ತು ಭಾದರ್ವಾ 6.0.ಕನಿಷ್ಠ ತಾಪಮಾನ ಸಂಭವಿಸಿದೆ.ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.