ಪ್ರತಿವರ್ಷ ಡಿಸೆಂಬರ್ 16 ಭಾರತಕ್ಕೆ ಸ್ಮರಣೀಯ ದಿನ, ಏಕೆಂದರೆ ಈ ದಿನ ಭಾರತ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಪಾಕ್ ವಿರುದ್ದ ಗೆಲುವು ಸಾಧಿಸಿದ ದಿನ.ಆ ಮೂಲಕ  ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಂಡು ಬಾಂಗ್ಲಾದೇಶ ಎಂದು ಹೆಸರಾಯಿತು. 


COMMERCIAL BREAK
SCROLL TO CONTINUE READING

1971 ರಲ್ಲಿ ಈ ದಿನದಂದು ಯುದ್ದವು ಅಂತ್ಯಗೊಂಡು ಪಾಕಿಸ್ತಾನದ ಸೈನ್ಯವು ಬೇಷರತ್ತಾದ ಶರಣಾಗತಿಯಾಯಿತು. ಪಾಕಿಸ್ತಾನದ ಸೈನ್ಯದ ಮುಖ್ಯಸ್ಥರಾದ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, 93,000 ಪಡೆ ಭಾರತೀಯ ಸೈನ್ಯ ಮತ್ತು ಮುಕ್ತಿ ಬಾಹಿಣಿಗೆ ಶರಣಾಗತಿಯಾಯಿತು.ಆದ್ದರಿಂದ ಭಾರತದಲ್ಲಿ ಈ ದಿನವನ್ನು ಯುದ್ದದಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ದೇಶದಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತದೆ.



ಈ ದಿನದಂದು ಪ್ರತಿವರ್ಷ ದೇಶದ ರಾಜಧಾನಿ ನವದೆಹಲಿಯಲ್ಲಿ ಭಾರತದ ರಕ್ಷಣಾ ಇಲಾಖೆ ಮತ್ತು ಭಾರತೀಯ ಸೇನಾಪಡೆಗಳ ಮೂರು ವಿಭಾಗಗಳ ಮುಖ್ಯಸ್ಥರು ದೆಹಲಿಯ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಗೌರವಾರ್ಪಣೆ ಮಾಡುತ್ತಾರೆ. 


ಬಾಂಗ್ಲಾದೇಶದ ವಿಮೋಚನೆಗಾಗಿ ಮಾರ್ಚ್ 26 ರಿಂದ ಡಿಸೆಂಬರ್ 16 ರವರೆಗೆ  ಪಾಕ್ ಜೊತೆಗೆ ಯುದ್ದವನ್ನು ಮಾಡಲಾಯಿತು.ಪಾಕಿಸ್ತಾನದ ಸೈನ್ಯವು ಆಪರೇಶನ್ ಸರ್ಚ್ ಲೈಟ್ ಕಾರ್ಯಾಚರಣೆ ಮೂಲಕ ಬೆಂಗಾಲಿ ನಾಗರಿಕರ ಮೇಲೆ ಹಿಂಸಾಚಾರವನ್ನು ನಡೆಸಲಾಯಿತು.ಈ ಹಿನ್ನಲೆಯಲ್ಲಿ 10 ಮಿಲಿಯನ್ ನಿರಾಶ್ರಿತರು ಭಾರತದತ್ತ ಪ್ರವೇಶಿಸಿದರು.ಇದರಿಂದ ಭಾರತವು ಸಹ ಮುಕ್ತಿ ಬಾಹಿನಿ ಜೊತೆ ಕೈಜೋಡಿಸಿ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಟ ನಡೆಸಿದರು.