ನವದೆಹಲಿ: ಭಾರತದ ವಿದೇಶಾಂಗ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ವಿಜಯ್ ಗೋಖಲೆ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಹಾಲಿ ಕಾರ್ಯದರ್ಶಿ ಎಸ್.ಜೈಶಂಕರ್ ಅವರ ಅಧಿಕಾರಾವಧಿ ಜನವರಿ 28,2018 ರಂದು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ  ಸೇವೆಗಳ (ಐಎಫ್‌ಎಸ್‌) ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ವಿಜಯ್‌ ಗೋಖಲೆ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ.


ವಿಜಯ್ ಗೋಖಲೆ ಅವರು ಜರ್ಮನಿ, ಮಲೇಶಿಯಾಗಳ ರಾಯಭಾರಿಯಾಗಿ ಮತ್ತು ತೈವಾನ್ ನ ಇಂಡಿಯ ಟೈಪೈ ಅಸೋಸಿಯೇಶನ್ ನ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. 


ಹಾಲಿ ನಿರ್ದೇಶಕ ಜೈಶಂಕರ್ ಅವರನ್ನು ಜನವರಿ 29,2015 ರಂದು 2 ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ಆದರೆ ಜನವರಿ 2017 ರಂದು ಅವರ ಅಧಿಕಾರವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗಿತ್ತು.