ನವದೆಹಲಿ: ಲಂಡನ್ನಿನ ಓವೆಲ್ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ವಿಶ್ವಕಪ್ 2019ರ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಣೆಗಾಗಿ ಮದ್ಯದ ದೊರೆ ವಿಜಯ ಮಲ್ಯ ಆಗಮಿಸಿದ್ದು, ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.  


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೆ ಆಸ್ಪದ ಕೊಡದ ಮಲ್ಯ, "ನಾನು ಇಲ್ಲಿ ಪಂದ್ಯ ವೀಕ್ಷಣೆಗಷ್ಟೇ ಬಂದಿದ್ದೇನೆ" ಎಂದು ಹೇಳಿದರು. ಸದ್ಯ ಭಾರತvsಆಸ್ಟ್ರೇಲಿಯಾ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಅಧಿಕ ರನ್ ಗಳಿಸಲು ಪ್ರಯತ್ನಿಸುತ್ತಿದೆ. 



ಕಿಂಗ್ ಫಿಷರ್ ಏರ್ಲೈನ್ಸ್ ಬ್ಯಾಂಕುಗಳಿಂದ ಪಡೆದ 9ಸಾವಿರ ಕೋಟಿ ರೂ. ಸಾಲ ಬಾಕಿ, ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಈ ಹಿಂದೆ ಲಂಡನ್ನಿನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಓವೆಲ್ ಮೈದಾನಕ್ಕೆ ಆಗಮಿಸಿದ್ದರು.