ಎರಡನೇ ಬಾರಿಗೆ ಗುಜರಾತ್ನ ಮುಖ್ಯಮಂತ್ರಿಯಾದ ವಿಜಯ್ ರುಪಾನಿ, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ
ಮುಖ್ಯಮಂತ್ರಿ ರುಪಾನಿ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ 20 ಮಂತ್ರಿಗಳು. 9 ಕ್ಯಾಬಿನೆಟ್ ಮತ್ತು 11 ರಾಜ್ಯ ಸಚಿವರ ಅಧಿಕಾರ ಸ್ವೀಕಾರ. ರೂಪಾನಿ ಕ್ಯಾಬಿನೆಟ್ನಲ್ಲಿ, ಒಬ್ಬ ಬ್ರಾಹ್ಮಣ, 1 ಜೈನ್, 1 ದಲಿತ, 3 ಆದಿವಾಸಿಗಳು, 2 ರಜಪೂತರು, 6 ಒಬಿಸಿಗಳು ಮತ್ತು 6 ಪಟಿದಾರ್ ಶಾಸಕರಿಗೆ ಮಣೆ.
ನವ ದೆಹಲಿ: ಗುಜರಾತ್ನಲ್ಲಿ, ವಿಜಯ್ ರೂಪಾನಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಗಾಂಧಿನಗರ ಸೆಕ್ರೆಟರಿಯಟ್ ಗ್ರೌಂಡ್ನಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಒ.ಪಿ. ಕೊಹ್ಲಿ ವಿಜಯ್ ರುಪಾನಿ ಸೇರಿದಂತೆ ಹಲವು ಮಂತ್ರಿಗಳಿಗೆ ಪ್ರಮಾಣ ವಚನ ನೀಡಿದರು. ಬೆಳಿಗ್ಗೆ 11.30 ರ ವೇಳೆಗೆ ಪ್ರಧಾನಮಂತ್ರಿ ಮೋದಿ, ಬಿಜೆಪಿ ಸ್ಥಾಪಕ ಎಲ್.ಕೆ. ಅಡ್ವಾಣಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಗೃಹ ಸಚಿವ ರಾಜ್ನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಸೇರಿದಂತೆ 30 ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತದ 18 ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು.
ಗುಜರಾತ್ ಮಾಜಿ ಮುಖ್ಯಮಂತ್ರಿಗಳಾದ ಆನಂದಭೀನ್ ಪಟೇಲ್, ಶಂಕರ್ ಸಿಂಗ್ ವಘೇಲಾ ಮತ್ತು ಕೇಶುಭಾಯಿ ಪಟೇಲ್ ಅವರು ಶಪಥ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್, ಅಸ್ಸಾಂನ ಸಿಎಂ ಸರ್ಬಾನಂದ ಸೋನೋವಾಲ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉತ್ತರಖಂಡದ ಸಿಎಂ ತ್ರಿವೆಂದ್ರ ಸಿಂಗ್ ರಾವತ್, ಛತ್ತೀಸ್ಗಢದ ಸಿಎಂ ಡಾ.ರಾಮನ್ ಸಿಂಗ್, ರಾಜಸ್ಥಾನ ವಸುಂಧರಾ ರಾಜೇ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಉಪಸ್ಥಿತರಿದ್ದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಸಹ ವಿಜಯ್ ರುಪಾನಿಯ ಪ್ರಮಾಣವಚನ ಸಮಾರಂಭದಲ್ಲಿ ತಲುಪಿದ್ದಾರೆ. 15 ವರ್ಷಗಳ ನಂತರ ನಿತೀಶ್ ಕುಮಾರ್ ಗುಜರಾತ್ಗೆ ಬಂದಿದ್ದಾರೆ.