ವಿಜಯಾ, ದೇನಾ ಮತ್ತು ಬರೋಡಾ ಬ್ಯಾಂಕ್ ವಿಲೀನಕ್ಕೆ ಮುಂದಾದ ಕೇಂದ್ರ ಸರ್ಕಾರ
ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಸತನವನ್ನು ತರುವ ನಿಟ್ಟಿನಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಾದ ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಗಳನ್ನು ವಿಲೀನಗೊಳಿಸಲಾಗುವುದು ಎಂದು ಸರಕಾರ ಹೇಳಿದೆ.
ನವದೆಹಲಿ: ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಸತನವನ್ನು ತರುವ ನಿಟ್ಟಿನಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಾದ ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಗಳನ್ನು ವಿಲೀನಗೊಳಿಸಲಾಗುವುದು ಎಂದು ಸರಕಾರ ಹೇಳಿದೆ.
ವಿಲೀನಗೊಂಡ ಬ್ಯಾಂಕ್ ಗೆ ಸರ್ಕಾರವು ಬಂಡವಾಳದ ಬೆಂಬಲವನ್ನು ಮುಂದುವರಿಸುತ್ತದೆ ಎಂದು ತಿಳಿಸಿದೆ.ಹಣಕಾಸು ಸಚಿವ ಅರುಣ್ ಜೇಟ್ಲಿಯೊಂದಿಗೆ ರಾಜ್ಯದ ಆರ್ಥಿಕತೆಯ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಫೈನಾನ್ಷಿಯಲ್ ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಈ ಘೋಷಣೆ ಮಾಡಿದರು.
ಬ್ಯಾಂಕುಗಳ ಬಲವರ್ಧನೆ ನಮ್ಮ ಕಾರ್ಯಸೂಚಿಯಲ್ಲಿದೆ ಆ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಮೊದಲ ಇದನ್ನು ಘೋಷಿಸಲಾಗಿದೆ ಎಂದು ಜೇಟ್ಲಿ ಹೇಳಿದರು.ಈ ವಿಲನದಿಂದ ಬ್ಯಾಂಕ್ ನ "ಯಾವುದೇ ಉದ್ಯೋಗಿಗಳು ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವುದಿಲ್ಲ ಬದಲಾಗಿ ಉತ್ತಮ ಸೇವಾ ಸ್ಥಿತಿ ಎಲ್ಲರಗೂ ಅನ್ವಯವಾಗಲಿದೆ ಎಂದರು.