ಕಾನ್ಪುರ: ಕಾನ್ಪುರ ಪೊಲೀಸ್ ಕೊಲೆ ಪ್ರಕರಣದಲ್ಲಿ ವಿಕಾಸ್ ದುಬೆ ಮತ್ತು ಮುಖ್ಯ ಆರೋಪಿಗಳಿಗೆ ಸಂಬಂಧಿಸಿದ ಜನರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಶನಿವಾರ ತನಿಖೆ ಆರಂಭಿಸಿದೆ. ಇದೀಗ ಇಡಿ ಅವರಿಗೆ ಸಂಬಂಧಿಸಿದ ಮಾಹಿತಿಯನ್ನು ಉತ್ತರಪ್ರದೇಶ ಪೊಲೀಸರಿಂದ ಕೋರಿದೆ. 


COMMERCIAL BREAK
SCROLL TO CONTINUE READING

ವಿಕಾಸ್ ದುಬೆ (Vikas Dubey) ಅವರ ಕುಟುಂಬ ಸದಸ್ಯರು ಮತ್ತು ಸಹವರ್ತಿಗಳಲ್ಲದೆ, ಜಾರಿ ನಿರ್ದೇಶನಾಲಯವು ಯುಪಿ ಪೊಲೀಸರಿಂದ ಅಪರಾಧ ಚಟುವಟಿಕೆಗಳಲ್ಲಿ ಅವರ ಬೆಂಬಲದ ಬಗ್ಗೆ ಮಾಹಿತಿ ಕೋರಿದೆ. ಇದಲ್ಲದೆ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಪ್ರಸ್ತುತ ಸ್ಥಿತಿಯ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ.


ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್‌


ಹಿಸ್ಟರಿ ಶೀಟರ್ ವಿಕಾಸ್ ದುಬೆ ಕಳೆದ 3 ವರ್ಷಗಳಲ್ಲಿ 15 ದೇಶಗಳಿಗೆ ಭೇಟಿ ನೀಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ವಿಕಾಸ್ ದುಬೆ ದುಬೈ ಮತ್ತು ಥೈಲ್ಯಾಂಡ್ನಲ್ಲಿ ಪೆಂಟ್ ಹೌಸ್ ಗಳನ್ನೂ ಖರೀದಿಸಿದ್ದಾರೆ ಮತ್ತು ಇತ್ತೀಚೆಗೆ ಲಖನೌದಲ್ಲಿ ಸುಮಾರು 20 ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.


ವಿಶೇಷವೆಂದರೆ ಜಾರಿ ನಿರ್ದೇಶನಾಲಯದ ಮೂಲಗಳ ಪ್ರಕಾರ  ದುಬೆ ಬಳಿ 5,200 ಕೋಟಿ ರೂ. ಮೌಲ್ಯದ ಆಸ್ತಿ ಇರಬಹುದು ಎಂದು ತಿಳಿದುಬಂದಿದೆ.