ಕೋಟಾ: ಕೋಟಾ ಜಿಲ್ಲೆಯ ಮದನ್ಪುರ ಮತ್ತು ಅಖಾರಿ ಗ್ರಾಮ ಪಂಚಾಯತ್ ಪ್ರದೇಶದ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ಥಳೀಯ ಸಂಸದರ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸ್ಥಳೀಯ ಸಂಸದರ ವಿರುದ್ಧ ಘೋಷಣೆಗಳನ್ನೂ ಕೂಗಿದರು.


COMMERCIAL BREAK
SCROLL TO CONTINUE READING

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮಸ್ಥರು, ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದರೂ ನಮ್ಮ ಗ್ರಾಮಕ್ಕೆ ಇನ್ನೂ ಕೂಡ ರಸ್ತೆ ಸೌಲಭ್ಯ ಸಿಕ್ಕಿಲ್ಲ. ಈ ಕಾರಣದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತಿದ್ದೇವೆ ಎಂದರು.

ಚುನಾವಣೆಗೂ ಮೊದಲು ಮತಯಾಚನೆಗಾಗಿ ಬರುವ ಅಭ್ಯರ್ಥಿಗಳು ತಾವು ಗೆದ್ದರೆ ಗ್ರಾಮದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆಗಳ ಮಹಾಪೂರವೇ ಹರಿಸುತ್ತಾರೆ. ಆದರೆ ಗೆದ್ದ ಬಳಿಕ ಯಾರೂ ಕೂಡ ಈ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


ಬಾರ್ಮರ್ ಮತ್ತು ಜೈಸಲ್ಮೇರ್ ಗ್ರಾಮಸ್ಥರಿಂದಲೂ ಮತದಾನ ಬಹಿಷ್ಕಾರ:
ಇದಕ್ಕೂ ಮೊದಲು ಬಾರ್ಮರ್ ಮತ್ತು ಜೈಸಲ್ಮೇರ್ ಎರಡೂ ಗ್ರಾಮಗಳ ಜನರು 'ಅಭಿವೃದ್ಧಿಯಿಲ್ಲದಿದ್ದರೆ ಮತವೂ ಇಲ್ಲ' ಎಂದು ಫಲಕಗಳನ್ನು ಹಾಕಿದ್ದರು. ಜೊತೆಗೆ ಸ್ವಾತಂತ್ರ್ಯ ಕಳೆದು 7 ದಶಕಗಳು ಕಳೆಯುತ್ತಾ ಬಂದರೂ ಗ್ರಾಮಕ್ಕೆ ವಿದ್ಯುತ್, ನೀರಿನ ಸೌಲಭ್ಯವಿಲ್ಲ. ಹಾಗಾಗಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಹೇಳಿದರು.


ರಾಜಸ್ಥಾನದಲ್ಲಿ 25 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣಾ ನಡೆಸಲಾಗುವುದು. ಏಪ್ರಿಲ್ 29 ಮತ್ತು ಮೇ 6 ರಂದು ರಾಜಸ್ಥಾನದಲ್ಲಿ ಮತದಾನ ನಡೆಯಲಿದೆ.