ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಗಳ ಮದುವೆ ವ್ಯಾಲಂಟೈನ್ ಡೇಗೆ ಆಗಲೆಂದು ತಮಾಷೆ ಮಾಡಿದ್ದೆ. ಈಗ ಅದೇ ವ್ಯಾಲಂಟೈನ್ ಡೇ ದಿನ ಮದುವೆಯಾಗುತ್ತಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್(D.K.Shivakumar) ಮಗಳ ಮದುವೆಗೆ ಕರೆಯೋಲೆ ನೀಡಲು ಬಂದಿದ್ದರು ಎಂದರು.


B.C.Patil: 'ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಿರೋರು ಭಯೋತ್ಪದಕರು'


ನನಗೆ ಎರಡು ಕುಟುಂಬದ ಜತೆಯೂ ನಿಕಟ ಸಂಪರ್ಕವಿದೆ. ಅವರ ಮದುವೆ ಆಶ್ರಮದ ಮದುವೆ ಇದ್ದಂತೆ. ಇಬ್ಬರಲ್ಲೂ ಒಂದೇ ಥಿಂಕಿಂಗ್ ಇದೆ. ಭವಿಷ್ಯದಲ್ಲಿ ಅವರಿಬ್ಬರೂ ತುಂಬಾ ಚೆನ್ನಾಗಿ ಇರುತ್ತಾರೆ ಎಂದು ವಿನಯ್‌ ಗುರೂಜಿ ತಿಳಿಸಿದರು.


Tractor Parade:ಬೆಂಗಳೂರಿನ ನಾಲ್ಕು ದಿಕ್ಕುಗಳಿಂದಲೂ ನುಗ್ಗುತ್ತಿದೆ ಹಸಿರುಸೇನೆ , ನೆಲಮಂಗಲದಲ್ಲಿ ಫುಲ್ ಟ್ರಾಫಿಕ್ ಜಾಮ್


ಸಿದ್ದಾರ್ಥ ಅವರು ಎಲ್ಲೆ ಇದ್ದರೂ ಸೂಕ್ಷ್ಮ ಶರೀರದಲ್ಲಿ ಇರುತ್ತಾರೆ. ಅವರು ಮಕ್ಕಳ ಮದುವೆ ಕಂಡು ಅಲ್ಲಿಂದಲೇ ಖುಷಿ ಪಡುತ್ತಾರೆ ಎಂದು ವಿನಯ್‌ ಗುರೂಜಿ ಇದೇ ಸಂದರ್ಭದಲ್ಲಿ ತಿಳಿಸಿದರು.


BJP: ಖಾತೆ ಬದಲಾವಣೆಯಿಂದ ಬೇಸತ್ತು ರಾಜೀನಾಮೆಗೆ ಮುಂದಾದ ಸಚಿವರು!?


ಡಿಕೆ ಶಿವಕುಮಾರ್‌ ಅವರು ರಂಭಾಪುರಿ ಶ್ರೀಗಳ ಮಠಕ್ಕೆ ತೆರಳಿ ಮದುವೆಯ ಕರೆಯೋಲೆ ನೀಡಿದರು. ನಂತರ ಗೌರಿ ಗದ್ದೆಯಿಂದ ಶೃಂಗೇರಿಗೆ ತೆರಳಿ ಶಾರದಾಂಬೆಯ ದರ್ಶನ ಪಡೆದ ಡಿಕೆ ಶಿವಕುಮಾರ್‌ ಅವರು ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು.


D.K.Shivakumar: 'ಈ ಸರ್ಕಾರ ಬಲಿಷ್ಠವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದಾರೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.