ನವದೆಹಲಿ: ನೀವು ದೇಸಿ ಜುಗಾಡ್‌(Desi Jugaad)ನ ಅನೇಕ ವಿಡಿಯೋಗಳನ್ನು ನೋಡಿರುತ್ತೀರಿ. ಅದೇ ರೀತಿಯ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋದಲ್ಲಿ ಕೆಸರಿನಿಂದ ಕೂಡಿದ ರಸ್ತೆಯನ್ನು ದಾಟಲು ಯುವಕನೊಬ್ಬ ‘ದೇಸಿ ಸ್ಪೈಡರ್ ಮ್ಯಾನ್’(Desi Spiderman) ಆಗಿದ್ದಾನೆ. ಈ ವಿಡಿಯೋ ನೋಡಿದರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರೆಂಟಿ.  


COMMERCIAL BREAK
SCROLL TO CONTINUE READING

ಕೆಸರಿನ ರಸ್ತೆ ದಾಟಿದ ‘ದೇಸಿ ಸ್ಪೈಡರ್ ಮ್ಯಾನ್’!


Viral Video)ದಲ್ಲಿ ಯುವಕನೊಬ್ಬ ಸೈಕಲ್‌ನಲ್ಲಿ ಸಾಮಾನುಗಳನ್ನು ಸಾಗಿಸುತ್ತಿರುವುದನ್ನು ನೀವು ಕಾಣಬಹುದು. ರಸ್ತೆ ತುಂಬಾ ಕೆಸರು ಮತ್ತು ನೀರು ತುಂಬಿರುವುದನ್ನು ಕಂಡ ಆತ ಇದನ್ನು ದಾಟುವುದು ಹೇಗೆ ಎಂದು ಯೋಚಿಸಿದ್ದಾನೆ. ಬಳಿಕ ಹೇಗಾದರೂ ಮಾಡಿ ರಸ್ತೆಯನ್ನು ದಾಟಲೇಬೇಕೆಂದು ನಿರ್ಧರಿಸಿದ ಆತ ತನ್ನ ಮೆದುಳಿಗೆ ಕೆಲಸ ಕೊಟ್ಟಿದ್ದಾನೆ. ‘ದೇಸಿ ಸ್ಪೈಡರ್ ಮ್ಯಾನ್’ ಆದ ಯುವಕ ಪಕ್ಕದಲ್ಲಿರುವ ಗೋಡೆಗೆ ತನ್ನ 2 ಕಾಲುಗಳನ್ನು ಹಾಕಿ ಸೈಕಲ್ ಮೇಲೆ ಸರಿಯಾಗಿ ಬ್ಯಾಲೆನ್ಸ್ ಮಾಡಿದ್ದಾನೆ.  


ಇದನ್ನೂ ಓದಿ: ಎದೆ ಝಲ್ಲೆನ್ನಿಸುವ ವಿಡಿಯೋ: ಪವಾಡಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾದ ಬಾಲಕ!


ಕೆಸರುಮಯ ರಸ್ತೆಯನ್ನು ದಾಟಲು ಯುವಕ ‘ದೇಸಿ ಸ್ಪೈಡರ್‌ಮ್ಯಾನ್‌’(Desi Spiderman) ಆಗಿ ಬದಲಾಗಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಯುವಕ ಸೈಕಲ್ ಸಹಾಯದಿಂದ ಗೋಡೆ ಏರಿ ಅತ್ಯಂತ ಸುಲಭವಾಗಿ ಕೆಸರುಮಯ ರಸ್ತೆ ದಾಟುತ್ತಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನರು ‘ದೇಸಿ ಸ್ಪೈಡರ್ ಮ್ಯಾನ್’ ಸಾಹಸವನ್ನು ನೋಡಿ ಬೆರಗಾಗಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಸ್ವಾತಿ ಲಾಕ್ರಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ. ಇದುವರೆಗೆ 45 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಇಂಟರ್ನೆಟ್ ಬಳಕೆದಾರರು ಸಹ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.   


ಇದನ್ನೂ ಓದಿ: Court Notice: ಶಿವನಿಗೆ ನ್ಯಾಯಾಲಯದ ನೋಟಿಸ್, ಆಟೋ ಮೂಲಕ ನ್ಯಾಯಾಲಯ ತಲುಪಿದ ಶಿವಲಿಂಗ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.