Trending News: ಹೆಣ್ಣು ಮೇಕೆ ಹಾಲು ಕೊಡುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಗಂಡು ಮೇಕೆಗಳು ಕೂಡ ಹಾಲು ಕೊಡುತ್ತವೆ ಎಂಬ ಸಂಗತಿ ಎಲ್ಲಾದರೂ ಕೇಳಿದ್ದೀರಾ ಅಥವಾ ನೋಡಿರುವಿರಾ? ಇಲ್ಲ ಎನ್ನಾದರೆ, ಕೇಳಿ. ಹಾಲು ಕೊಡುವ ಮತ್ತು ಪ್ರಸ್ತುತ ಭಾರಿ ಚರ್ಚೆಗೆ ಗ್ರಾಸವಾಗಿರುವ ಅಂತಹ ಮೇಕೆಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಮಧ್ಯಪ್ರದೇಶದ ಬುರ್ಹಾನ್‌ಪುರದ ಪ್ದ್ರದೆಶವೊಂದರಲ್ಲಿ ಸರ್ತಾಜ್ ಗೋಟ್ ಫಾರ್ಮ್‌ನಲ್ಲಿ ನಾಲ್ಕು ಗಂಡು ಮೇಕೆಗಳು ಹೆಣ್ಣು ಮೇಕೆಗಳಂತೆ ಹಾಲು ಕೊಡುತ್ತಿವೆ. ಈ ಅದ್ಭುತ ಗಂಡು ಮೇಕೆಗಳನ್ನು ನೋಡಲು ಜನರು ದೂರದೂರುಗಳಿಂದ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ.  ಜನರು ಹಾಲು ಕೊಡುವ ಈ ಗಂಡು ಮೇಕೆಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಆ ಮೇಕೆಗಳ ಬೆಲೆ ಕೇಳಿ ನೀವೂ ಕೂಡ ದಂಗಾಗುವಿರಿ. ಈ ಮೇಕೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಹಾಲು ಕೊಡುವ ಎಲ್ಲಾ 4 ಗಂಡು ಮೇಕೆಗಳು ವಿವಿಧ ತಳಿಗಳ ಮೆಕೆಗಲಾಗಿವೆ. ಸುಮಾರು ಎರಡೂವರೆ ವರ್ಷಗಳಿಂದ ಈ ಗಂಡು ಮೇಕೆಗಳು ಹಾಲು ನೀಡುತ್ತಿವೆ ಎನ್ನುತ್ತಾರೆ ಮೇಕೆ ಸಾಕಾಣಿಕೆ ಕೇಂದ್ರದ ವ್ಯವಸ್ಥಾಪಕ ಸಾಜಿದ್ ಅಖ್ತರ್. ಪ್ರಸ್ತುತ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ವಿಷಯ ಸಾಮಾನ್ಯವಾಗಿದೆ, ಆದರೆ ಇದರ ಬಗ್ಗೆ ಸಂಶೋಧನೆ ಮಾಡಲು ಸಾಕಷ್ಟು ಜನರು ದೂರದೂರುಗಳಿಂದ ಅಲ್ಲಿಗೆ ಆಗಮಿಸುತ್ತಿದ್ದಾರೆ.


ಈ ಹಾಲು ಹೇಗಿದೆ?
ಮೇಕೆ ಹಾಲು ಸಾಮಾನ್ಯ ಹಾಲಿನಂತೆಯೇ ಇದೆ ಎಂದು ಅಖ್ತರ್ ಹೇಳುತ್ತಾರೆ. ನಾವು ಅದನ್ನು ಮೇಕೆ ಹಾಲಿನಲ್ಲಿ ಬೆರೆಸುತ್ತೇವೆ. ಈ ಹಾಲಿನ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಇದರ ವರದಿ ಇನ್ನೂ ಬಂದಿಲ್ಲ. ಈ ಸರ್ತಾಜ್ ಮೇಕೆ ಸಾಕಾಣಿಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಆರು ವರ್ಷಗಳ ಹಿಂದೆ ಬುರ್ಹಾನ್‌ಪುರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಯಿತು. 12ಕ್ಕೂ ಹೆಚ್ಚು ಜಾತಿಯ 350ಕ್ಕೂ ಹೆಚ್ಚು ಮೇಕೆಗಳು ಅಲ್ಲಿವೆ.


ಇದನ್ನೂ ಓದಿ-Viral Video : ನಿಂತಿದ್ದ ಆಟೋದಲ್ಲಿ ದೆವ್ವದ ಕುಚೇಷ್ಟೆ? ಚಾಲಕನಿಲ್ಲದೇ ಚಲಿಸಿದ ರಿಕ್ಷಾ ಕಂಡು ದಂಗಾದ ಜನ!


ಆಡು ಸಾಕಾಣಿಕೆ ವ್ಯಾಪಾರ ಮಾಡುವವರಿಗೆ ಪ್ರತಿ ತಿಂಗಳು ಅಲ್ಲಿ ತರಬೇತಿ ನೀಡಲಾಗುತ್ತದೆ.  ಈ ತರಬೇತಿಯ ಸಮಯದಲ್ಲಿ, ಅಲ್ಲಿ ಇರುವ 4 ಗಂಡು ಮೇಕೆಗಳು ಹೆಣ್ಣು ಮೇಕೆಗಳಂತೆ ಹಾಲು ನೀಡುವುದನ್ನು ತರಬೇತಿದಾರರೊಬ್ಬರು ಗಮನಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ನೌಕರರನ್ನು ಪ್ದ್ರಶ್ನಿಸಿದಾಗ ಇದೇನು ತಮಗೆ ಹೊಸ ವಿಷಯವಲ್ಲ ಎನ್ನುತ್ತಾರೆ. ಆದರೆ, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ, ಗಂಡು ಮೇಕೆ ಕೂಡ ಹಾಲು ನೀಡಬಹುದೇ ಎಂದು ಜನರು ಆಶ್ಚರ್ಯಚಕಿತರಾಗಿದ್ದಾರೆ.


ಇದನ್ನೂ ಓದಿ-Viral Video: ದೇವರ ಧ್ಯಾನ ಮಾಡುತ್ತಲೇ ಸಾವನ್ನಪ್ಪಿದ ವ್ಯಕ್ತಿ...!


ಹಾಲು ಕೊಡುವ ಗಂಡು ಮೇಕೆಗಳ ತಳಿ ಯಾವುದು?
ನಾಲ್ಕು ಆಡುಗಳಲ್ಲಿ ಒಂದು ಪಂಜಾಬ್‌ನ ಬಿಟಾಲ್ ಪ್ರಜಾತಿಯದ್ದು, ಒಂದು ಚಂಬಲ್‌ ನ ಹಂಸ ಪ್ರಜಾತಿಯದ್ದು, ಒಂದು ಹೈದರಾಬಾದ್‌ ನಿಂದ ತರಲಾಗಿದ್ದು ಅದನ್ನು ತರಲಾದ ಹೈದರಾಬಾದಿ ಮೇಕೆ ಎಂದು ಕರೆಯಲಾಗುತ್ತಿದೆ ಮತ್ತು ಒಂದು ಮೇಕೆ ಅಹಮದಾಬಾದ್‌ನಿಂದ ಬಂದಿದ್ದು, ಅದರ ಜಾತಿ ಪಥಿರಾ ಎನ್ನಲಾಗಿದೆ. ಇದರಲ್ಲಿ ಅತ್ಯಂತ ದುಬಾರಿ ಮೇಕೆ ಹಂಸ ಜಾತಿಯ ಸುಲ್ತಾನ್ ಆಗಿದ್ದು, ಇದರ ಬೆಲೆ 3.5 ಲಕ್ಷ ರೂ.ಗಳಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.