ನವದೆಹಲಿ: ಕೆಲವೊಮ್ಮೆ ನಾವು ಏನೂ ಮಾಡದಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಭವಿಷ್ಯದಲ್ಲಿ ಏನಾದರೂ ಒಳಿತಾಗಬಹುದೆಂದು ನಾವು ನಂಬಬೇಕು. ಹೌದು, ಧನಾತ್ಮಕ ಚಿಂತನೆಯು ಯಾವುದೇ ವ್ಯಕ್ತಿಗೆ ಅಮೃತದಂತೆ ಕೆಲಸ ಮಾಡುತ್ತದೆ. ನಾವು ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ಛಲವನ್ನು ಹೊಂದಿರಬೇಕು. ಭಾರತದಲ್ಲಿ ಪ್ರವಾಹ ಒಂದು ದೊಡ್ಡ ಸಮಸ್ಯೆ. ಭಾರೀ ಮಳೆಯಿಂದಾಗಿ ಈ ವರ್ಷ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ(Flood Situation)ಪರಿಸ್ಥಿತಿ ಉಂಟಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಅನೇಕರು ಧೈರ್ಯದಿಂದ ಎದುರಿಸಿದ್ದಾರೆ.


COMMERCIAL BREAK
SCROLL TO CONTINUE READING

ಪುಟ್ಟ ಮಗುವಿನ ಚಿತ್ರ ಅಂತರ್ಜಾಲದಲ್ಲಿ ವೈರಲ್  


ಭೀಕರ ಪ್ರವಾಹ(Flood)ದ ಹೊಡೆತಕ್ಕೆ ಅನೇಕ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧ ಜಿಲ್ಲೆಗಳಲ್ಲಿ  ಸ್ಥಳೀಯ ಜನರು ತಮ್ಮ ಮನೆ-ಮಠ ಬಿಟ್ಟು ತೆರಳಬೇಕಾದಂತಹ ಪರಿಸ್ಥಿತಿಯುಂಟಾದೆ. ಪ್ರವಾಹದ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಮನೆಯಿಂದಲೇ ದೂರವಾಗಬೇಕಾಯಿತು. ತಿನ್ನಲು ಆಹಾರ ಮತ್ತು ಕುಡಿಯಲು ನೀರು ಸೇರಿದಂತೆ ಸಾವಿರಾರು ಜನರಿಗೆ ಅನೇಕ ಸಮಸ್ಯೆಗಳು ಬಂದೊಂದಗಿವೆ.  


ಇದನ್ನೂ ಓದಿ: Post Office MIS Scheme: ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ ಅಂಚೆ ಕಚೇರಿಯ ಈ ಯೋಜನೆ


ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಒಂದು ಚಿಕ್ಕ ಮಗು ಇದ್ದರೆ ಪರಿಸ್ಥಿತಿ ಮತಷ್ಟು ಗಂಭೀರವಾಗುತ್ತದೆ. ಅದನ್ನು ಜತನದಿಂದ ಕಾಪಾಡಿ ಬೆಳೆಸಲು ಕುಟುಂಬಸ್ಥರಿಗೆ ದೊಡ್ಡ ಸಮಸ್ಯೆಯುಂಟಾಗುತ್ತದೆ. ಇಂತಹ ಒಂದು ಚಿತ್ರವು ಸಾಮಾಜಿಕ ಮಾಧ್ಯಮ(Social Media)ದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ ಜನರ ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತಿದೆ. ಕೆಲವೇ ದಿನಗಳ ಹಿಂದೆ ಜನಿಸಿದ ಪುಟ್ಟ ಮಗು ಕೂಡ ಪ್ರವಾಹದಂತಹ ಭೀಕರ ಸಮಸ್ಯೆಯನ್ನು ಎದುರಿಸಬೇಕಾಯಿತು.


ಇದನ್ನೂ ಓದಿ: Coronavirus: ಪಾಸ್‌ಪೋರ್ಟ್ ನಿಯಮಗಳಲ್ಲಿ ಬದಲಾವಣೆ, ಇಲ್ಲಿದೆ ಮಹತ್ವದ ಮಾಹಿತಿ


ಭೀಕರ ಪ್ರವಾಹದಲ್ಲಿಯೇ ಚಿಕ್ಕ ಮಗುವಿಗೆ ಪೋಲಿಯೋ ಹನಿ


ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿಯೇ ಜನಿಸಿದ ಮಗುವಿನ ಆರೈಕೆ ಮಾಡಲು ಅದರ ಪೋಷಕರು ತುಂಬಾ ಕಷ್ಟಪಟ್ಟಿದ್ದಾರೆ. ಪುಟ್ಟ ಮಗುವಿನ ಪೋಷಕರು ಎಷ್ಟು ಜಾಗೃತರಾಗಿದ್ದರೆಂದರೆ ಸರಿಯಾದ ಸಮಯಕ್ಕೆ ಪೋಲಿಯೋ ಹನಿ(Polio Vaccine) ಹಾಕಿಸಲು ಮರೆಯಲಿಲ್ಲ. ಮಳೆ ನೀರಿನಿಂದ ರಕ್ಷಿಸಲು ಮಗುವನ್ನು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಇಟ್ಟಿರುವುದನ್ನು ಚಿತ್ರದಲ್ಲಿ ಕಾಣಬಹುದು. ಈ ಚಿತ್ರವು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ದೆಹಲಿ ಮೂಲದ ಏಮ್ಸ್ ವೈದ್ಯ ಯೋಗಿರಾಜ್ ರೈ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ. ‘ಗಂಗಾ ನದಿಯ ತಟದಲ್ಲಿ ಪುಟ್ಟ ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ’ ನೀಡಲಾಗಿದೆ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಜಲಾವೃತ ಪ್ರದೇಶಗಳಲ್ಲಿ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿಗೆ ಪೋಲಿಯೋ ಲಸಿಕೆ ನಿಡಿದ ಆರೋಗ್ಯ ಕಾರ್ಯಕರ್ತರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.