Viral News: ಬಿಹಾರದ (Bihar) ಐತಿಹಾಸಿಕ ಪಟ್ಟಣ ವೈಶಾಲಿಗಢದಲ್ಲಿ ಬಾವಲಿಗಳನ್ನು(Bats) ಪೂಜಿಸಲಾಗುತ್ತದೆ. ಬಾವಲಿಗಳು ತಮ್ಮನ್ನು ರಕ್ಷಿಸುತ್ತವೆ ಎಂಬುದು ಅಲ್ಲಿನ ಜನರ ಬಲವಾದ ನಂಬಿಕೆ. ಇದರ  ಹಿಂದೆ ಒಂದು ರೋಚಕ ಕಥೆಯಿದೆ. ಮಧ್ಯಕಾಲೀನ ಯುಗದಲ್ಲಿ, ವೈಶಾಲಿಯಲ್ಲಿ ಸಾಂಕ್ರಾಮಿಕ ಹರಡಿತ್ತು. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಬಾವಲಿಗಳು ಅಲ್ಲಿ ವಾಸಿಸಲು ಪ್ರಾರಂಭಿಸಿದವು. ಅಂದಿನಿಂದ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ವೈಶಾಲಿಯಲ್ಲಿ ಹರಡಿಲ್ಲ ಎನ್ನುತ್ತಾರೆ ಅಲ್ಲಿನ ಜನ. ಅಷ್ಟೇ ಅಲ್ಲ ಅಂದಿನಿಂದ ಬಾವಲಿಗಳನ್ನು ಅಲ್ಲಿ ಮಂಗಳಕರವೆಂದು ಪರಿಗಣಿಸಲು ಅವರು ಪ್ರಾರಂಭಿಸಿದರು ಎನ್ನಲಾಗುತ್ತದೆ. 


COMMERCIAL BREAK
SCROLL TO CONTINUE READING

ನೂರಾರು ವರ್ಷಗಳಿಂದ ಬಾವಲಿಗಳು ಇಲ್ಲಿನ ಮರಗಳ ಮೇಲೆ ವಾಸಿಸುತ್ತಿವೆ
ವೈಶಾಲಿ (Vaishali) ಜಿಲ್ಲೆಯ ಸರ್ಸಾಯಿ (Sarsai Village) ಗ್ರಾಮವು ಬಾವಲಿಗಳ ಆರಾಧನೆಗೆ ಹೆಸರುವಾಸಿಯಾಗಿದೆ. ಅಲ್ಲಿ ಬಾವಲಿಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳನ್ನು ಪೂಜಿಸಲಾಗುತ್ತದೆ (Bat Worship). ಆದರೆ, ಮೂರು ವರ್ಷಗಳ ಹಿಂದೆ ನಿಪಾಹ್ ವೈರಸ್ ಹರಡಿದಾಗ, ಈ ಗ್ರಾಮದ ಜನರು ಬಾವಲಿಗಳಿಂದ ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಿದರು. ಆಗ ನಿಪಾ ವೈರಸ್‌ನಿಂದಾಗಿ ಗ್ರಾಮಸ್ಥರೆಲ್ಲರೂ ಭಯಭೀತರಾಗಿದ್ದಾರೆ. ನೂರಾರು ವರ್ಷಗಳಿಂದ ಈ ಗ್ರಾಮದಲ್ಲಿ ಬಾವಲಿಗಳು ಮರಗಳ ಮೇಲೆ ವಾಸಿಸುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ (Viral News).


ಇದನ್ನೂ ಓದಿ-ನಾಲ್ಕು ಕಿವಿಗಳುಳ್ಳ ಬೆಕ್ಕನ್ನು ಎಂದಾದರೂ ನೋಡಿದ್ದೀರಾ? ಈ ಬೆಕ್ಕಿಗೆ ಸಾವಿರಾರು ಫಾಲೋವರ್ಸ್


ಬಾವಲಿಗಳ ಬಗ್ಗೆ ಹಳ್ಳಿಗರ ನಂಬಿಕೆ ಹೀಗಿದೆ (Benefits Of Bats)
ಈ ಬಾವಲಿಗಳಿಂದ ಆ  ಗ್ರಾಮದಲ್ಲಿ ಇದುವರೆಗೆ ಯಾವುದೇ ಗಂಭೀರ ಕಾಯಿಲೆ ಹರಡಿಲ್ಲ ಎಂದು ನಂಬಲಾಗಿದೆ. ಈ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅನೇಕ ಬಾರಿ ಗುಣಪಡಿಸಲಾಗದ ಗಂಭೀರ ಕಾಯಿಲೆಗಳು ಹರಡಿವೆ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಆದರೆ ಸರ್ಸಾಯಿ ಗ್ರಾಮದಲ್ಲಿ ಬಾವಲಿಗಳಿಂದ ಯಾವುದೇ ರೋಗ ಹರಡುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ನೈಸಗಿಕವಾಗಿ ಬೀಡುಬಿಟ್ಟಿರುವ ಖಾಲಿ ಪ್ರದೇಶಗಳಲ್ಲಿ ವಾಸಿಸುವ ಈ ಬಾವಲಿಗಳು ಇಂದು ಮನುಷ್ಯರ ಹತ್ತಿರ ಬಂದಿವೆ ಎಂದರೆ ಅದಕ್ಕೆ ಮನುಷ್ಯರೇ ಕಾರಣ. ಹಣ್ಣುಗಳ ಮೇಲೆ ಅವಲಂಭಿಸಿರುವ ಈ ಜೀವ ಕಡಿಮೆಯಾಗುತ್ತಿರುವ ಕಾಡು ಹಾಗೂ ಆಹಾರ ಹುಡುಕಾಟಕ್ಕೆ ಜನನಿಬಿಡ ಪ್ರದೇಶಗಳಿಗೆ ಬರುತ್ತಿವೆ ಹಾಗೂ ತಮ್ಮ ವಾಸಸ್ಥಾನಗಳನ್ನೂ ಮಾಡಿಕೊಳ್ಳುತ್ತಿವೆ. 


ಇದನ್ನೂ ಓದಿ-Hardik Pandya ಅವರ ಕೋಟ್ಯಾಂತರ ಬೆಲೆ ವಾಚ್ ಗಿಂತಲೂ ದುಬಾರಿಯಾಗಿವೆ ಈ ಐದು ಗಡಿಯಾರಗಳು


ನಂಬಿಕೆಗಳಲ್ಲಿ ಅಗಾಧ ವ್ಯತ್ಯಾಸವಿದೆ (Useful Bat)
ಪುರಾತನ ಭಾರತೀಯ ನಂಬಿಕೆಗಳಲ್ಲಿ ಮನೆಯಲ್ಲಿ ಬಾವಲಿಗಳ ಉಪಸ್ಥಿತಿಯು ಅಶುಭವೆಂದು ಪರಿಗಣಿಸಲ್ಪಟ್ಟಿದ್ದರೂ, ಫೆಂಗ್ ಶೂಯಿ ನಂಬಿಕೆಯ ಪ್ರಕಾರ, ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ, ಇದು ನಿಮ್ಮನ್ನು ದೀರ್ಘಕಾಲ ಬದುಕುವಂತೆ ಮಾಡುತ್ತದೆ.


ಇದನ್ನೂ ಓದಿ-Yezdi Bike: ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಶಕ್ತಿಶಾಲಿ ಬೈಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.