ಪಾಟ್ನ: ರಾಜ್ಯದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಇದುವರೆಗೆ ಬಿಹಾರದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ಪಾಟ್ನಾದ ಮಸೌರಿ ಪ್ರದೇಶಕ್ಕೆ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ ರಾಮ ಕೃಪಾಳ್ ಯಾದವ್ ಅವರು ನೀರಿನೊಳಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 



ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಚಿಕ್ಕ ತೆಪ್ಪವೊಂದರಲ್ಲಿ ಸುಮಾರು 6 ರಿಂದ 10 ಜನರೊಂದಿಗೆ ತೆರಳಿದ್ದ ಸಂಸದ ರಾಮ ಕೃಪಾಳ್ ಅವರು, ಇದ್ದಕ್ಕಿದ್ದಂತೆ ತೆಪ್ಪ ನೀರಿನಲ್ಲಿ ಮುಳುಗಿದ ಕಾರಣ ನಿರಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಿಸಿ ನೀರಿನಿಂದ ಹೊರಗೆ ಕರೆತಂದಿದ್ದಾರೆ.


ಇದೇ ವೇಳೆ, ಬಿಹಾರದ ನೈರುತ್ಯ ಜಿಲ್ಲೆಗಳಲ್ಲಿ ಅಕ್ಟೋಬರ್ 3 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಪಾಟ್ನಾ, ವೈಶಾಲಿ, ಬೆಗುಸರಾಯ್ ಮತ್ತು ಖಗೇರಿಯಾ ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆ ನೀಡಲಾಗಿದೆ.