Video ನೋಡಿ: ಮದುಮಕ್ಕಳ ಫೋಟೋ ಕ್ಲಿಕ್ಕಿಸುತ್ತ ನೀರಿಗೆ ಬಿದ್ದ ಫೋಟೋಗ್ರಾಫರ್!
ಫೋಟೋಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದಿದ್ದಾನೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ನಡೆಯುವ ಹಾಸ್ಯ ಪ್ರಸಂಗಗಳ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಸದ್ಯ ಮತ್ತೊಂದು ಅಂತಹದ್ದೇ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಮದುವೆ ವೇಳೆ ನೂತನ ವಧು-ವರರ ಫೋಟೋಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್(Photographer)ಒಬ್ಬ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದಿದ್ದಾನೆ. ಈ ದೃಶ್ಯ ಕಂಡು ಮದುಮಕ್ಕಳೇ ಒಂದುಕ್ಷಣ ದಂಗಾಗಿ ಹೋಗಿದ್ದಾರೆ.
ಹೌದು, ವಿವಾಹದ ಫೋಟೋಶೂಟ್(Wedding Photoshoot)ವೇಳೆ ಫೋಟೋಗ್ರಾಫರ್ ಆಯತಪ್ಪಿ ನೀರಿನೊಳಗೆ ಬಿದ್ದು ಮತ್ತೆ ಎದ್ದು ಬಂದಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಿಂಗಾರಗೊಂಡಿದ್ದ ವಧು-ವರರು ನಿಧಾನಕ್ಕೆ ಹೆಜ್ಜೆ ಇಡುತ್ತಾ ಮದುವೆ ಮನೆಯಿಂದ ಹೊರಗಡೆ ಬರುತ್ತಿರುತ್ತಾರೆ. ಈ ಸುಂದರ ಕ್ಷಣವನ್ನು ಸೆರೆ ಹಿಡಿಯುವ ಅವಸರದಲ್ಲಿ ಫೋಟೋಗ್ರಾಫರ್ ಹಿಂದೆ ಏನಿದೆ ಎಂಬುದನ್ನೇ ಗಮನಿಸುವುದಿಲ್ಲ. ಫೋಟೋ ತೆಗೆಯುತ್ತಾ ತೆಗೆಯುತ್ತಾ ಹಿಂದಕ್ಕೆ ಹೋಗುತ್ತಾನೆ. ತನಗೆ ಗೊತ್ತಿಲ್ಲದಂತೆಯೇ ಜಾರಿ ಈಜುಕೊಳದೊಳಗೆ ಬೀಳುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: RBI Rule Alert : ನಿಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತಿಳಿದುಕೊಂಡಿರಿ, ಇಲ್ಲವಾದರೆ ದಂಡ ತೆರಬೇಕಾದಿತು
ನವಜೋಡಿಯ ದೃಶ್ಯ ಸೆರೆ ಹಿಡಿಯಲು ಹೋಗಿ ಛಾಯಾಗ್ರಾಹಕ ಸ್ವಿಮ್ಮಿಂಗ್ ಪೂಲ್(Swimming Pool)ನೊಳಗೆ ಬಿದ್ದು ಸಂಪೂರ್ಣವಾಗಿ ಒದ್ದೆಯಾಗುತ್ತಾನೆ. ಆದರೆ ನೀರಿಗೆ ಬಿದ್ದರೂ ಕೂಡ ತನ್ನ ಕ್ಯಾಮೆರಾವನ್ನು ಉಳಿಸಿಕೊಳ್ಳುತ್ತಾನೆ. ಯಾರಾದರೂ ಆಗಿದ್ದರೆ ಈಜುಕೊಳಕ್ಕೆ ಬಿದ್ದ ಭಯದಲ್ಲಿ ಕೈಯಲ್ಲಿದ್ದ ಕ್ಯಾಮೆರಾವನ್ನು ನೀರಿನೊಳಗೆ ಹಾಕಿಬಿಡುತ್ತಿದ್ದರು. ಆದರೆ ಈತ ಮಾತ್ರ ತನ್ನ ಕ್ಯಾಮೆರಾವನ್ನು ಮೇಲಕ್ಕೆತ್ತಿ ಹಿಡಿದು ಅದಕ್ಕೆ ಏನು ಆಗದಂತೆ ನೋಡಿಕೊಂಡಿದ್ದಾನೆ. ನೀರಿಗೆ ಬಿದ್ದ ತಕ್ಷಣವೇ ಆತ ಮೇಲೆದ್ದು ಬಂದಿದ್ದರಿಂದ ಕ್ಯಾಮೆರಾಗೆ ಯಾವುದೇ ರೀತಿ ಹಾನಿಯುಂಟಾಗಿಲ್ಲ.
ಇದನ್ನೂ ಓದಿ: EPF ಖಾತೆದಾರರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದರೆ 7 ಲಕ್ಷ ರೂ ಗಳ ನಷ್ಟವಾಗಬಹುದು
ಇನ್ನು ಫೋಟೋಗ್ರಾಫರ್ ಈಜುಕೊಳದೊಳಗೆ ಬೀಳುತ್ತಿದ್ದಂತೆ ವಧು-ವರರ ಸೇರಿದಂತೆ ನೆರೆದಿದ್ದ ಅತಿಥಿಗಳು ಒಂದು ಕ್ಷಣ ದಂದಾಗಿ ಹೋಗಿದ್ದಾರೆ. ಯಾವಾಗ ಆತ ನೀರಿನಿಂದ ಮೇಲಕ್ಕೆದ್ದು ಬಂದನೋ ಎಲ್ಲರೂ ನಸುನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಶೇರ್ ಆದ ಕೆಲ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ನೀರಿಗೆ ಬಿದ್ದರೂ ಫೋಟೋಗ್ರಾಫರ್ ಕ್ಯಾಮೆರಾಗೆ ಏನೂ ಆಗದಂತೆ ಮೇಲಕ್ಕೆದ್ದು ಬಂದಿದ್ದಕ್ಕೆ ಶಹಬ್ಬಾಸ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ