ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಅನೇಕ ಮದುವೆ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆ ಮನೆಯಲ್ಲಿ ನಡೆಯುವ ತಮಾಷೆಯ ಘಟನೆಗಳು ನೋಡುಗರ ಮೊಗದಲ್ಲಿ ಮಂದಹಾಸ ಮೂಡಿಸುತ್ತವೆ. ಮದುವೆ ಸಂಭ್ರಮದ ಮಧ್ಯೆಯೇ ನಡೆಯುವ ಹಾಸ್ಯ ಪ್ರಸಂಗಗಳು ನಮ್ಮ ಮುಖದಲ್ಲಿ ನಗುವರಳಿಸುತ್ತದೆ. ಈ ರೀತಿಯ ಅನೇಕ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಕಾಣಸಿಗುತ್ತವೆ. ಸದ್ಯ ಇದೇ ರೀತಿಯ ತಮಾಷೆಯ ವಿಡಿಯೋವೊಂದು ಸಖತ್ ಸದ್ದು ಮಾಡುತ್ತಿದೆ.   


COMMERCIAL BREAK
SCROLL TO CONTINUE READING

ಮದುವೆ ಮಂಟಪದಲ್ಲಿ ಸಂಭ್ರಮದ ಜೊತೆಗೆ ತಮಾಷೆ, ಹಾಸ್ಯ, ಕೀಟಲೆಗಳಿಗೆ ಕೊರತೆ ಇಲ್ಲ. ವಿವಾಹದ ವೇಳೆ ನಡೆಯುವ ತಮಾಷಾ ಪ್ರಸಂಗಗಳು ಬಹುಬೇಗನೇ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿಬಿಡುತ್ತವೆ. ಈ ರೀತಿಯ ಹಾಸ್ಯ ಘಟನೆಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಬಿದ್ದು ಬಿದ್ದು ಹೊಟ್ಟೆ ಹುಣ್ಣಾಗುವಂತೆ ನಗುವ ಹಾಸ್ಯ ಘಟನೆಗಳಿಗೆ ಮದುವೆ ಮನೆ ಸಾಕ್ಷಿಯಾಗಿರುತ್ತದೆ.


ಇದನ್ನೂ ಓದಿ: Mysterious Temple: ಇದುವರೆಗೂ ಬಾಗಿಲು ತೆರೆಯದ ವಿಶ್ವದ ಏಕೈಕ ದೇವಸ್ಥಾನ, ಎಲ್ಲಿದೆ ತಿಳಿಯಿರಿ



ಕೊರೊನಾ ಕಾರಣದಿಂದ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದ್ದವು. ಆದರೆ ಬರೀ ಮನೆಯಲ್ಲಿ ಮಾತ್ರವಲ್ಲ ಕೆಲ ಉದ್ಯೋಗಿಗಳು ತಮ್ಮ ಮದುವೆ ಶುಭಸಂದರ್ಭದಲ್ಲಿಯೂ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಮದುವೆ ಮಂಟಪದಲ್ಲಿಯೇ ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಂಡು ನೋಡುಗರ ಮೊಗದಲ್ಲಿ ನಗೆಯುಕ್ಕಿಸಿದ್ದಾರೆ. ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಧುವೊಬ್ಬಳು ಲ್ಯಾಪ್‌ಟಾಪ್ ಹಿಡಿದು ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಮದುವೆ ಖುಷಿಗಿಂತಲೂ ವಧುವಿಗೆ ಕೆಲಸದ ಒತ್ತಡವೇ ಜಾಸ್ತಿ ಇತ್ತು ಅಂತಾ ಕಾಣುತ್ತದೆ. ತನ್ನ ಮದುವೆ ಸಂಭ್ರಮವನ್ನೇ ಮರೆತು ಆಕೆ ಲ್ಯಾಪ್‌ಟಾಪ್ ಮತ್ತು ಫೋನ್‌ನಲ್ಲಿ ಬ್ಯುಸಿಯಾಗಿದ್ದಾಳೆ.


ಇದನ್ನೂ ಓದಿ: Mumbai Drug Case :ಆರ್ಯನ್ ಖಾನ್ ಮತ್ತೊಬ್ಬ ಸ್ನೇಹಿತನ ಬಂಧನ, ಡ್ರಗ್ ಪೆಡ್ಲರ್ ಕೂಡಾ ವಶಕ್ಕೆ


ತನ್ನ ಪತ್ನಿ ಹೀಗೆ ಲ್ಯಾಪ್‌ಟಾಪ್ ಹಿಡಿದು ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಆಕೆಯ ಪಕ್ಕದಲ್ಲಿಯೇ ಕುಳಿತುಕೊಂಡು ವರ ಕೆಲಕಾಲ ವೀಕ್ಷಿಸಿದ್ದಾನೆ. ಆದರೆ ತನ್ನದೇ ಲೋಕದಲ್ಲಿ ಮುಳುಗಿದ್ದ ವಧು ವರನತ್ತ ನೋಡುವುದೇ ಇಲ್ಲ. ವಧು ತನ್ನ ಮದುವೆ ದಿನವೂ ಕೆಲಸದಲ್ಲಿ ಬ್ಯುಸಿಯಾಗಿರುವುದನ್ನು ಕಂಡು ವಿವಾಹ ಸಮಾರಂಬಕ್ಕೆ ಆಗಮಿಸಿದ್ದ ಅತಿಥಿಗಳು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.