ಭುವನೇಶ್ವರ: ಸಾಮಾನ್ಯವಾಗಿ ಸಂಚಾರಿ ಪೊಲೀಸರು ಆಕಡೆ ಈಕಡೆ ಕೈ ತೋರಿಸುತ್ತಾ ಸಂಚಾರ ನಿಯಂತ್ರಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೋರ್ವ ಸಂಚಾರಿ ಪೊಲೀಸ್ ವಿಶೇಷ ಶೈಲಿಯಲ್ಲಿ ಡ್ಯಾನ್ಸ್ ಮಾಡುತ್ತಲೇ ಸಂಚಾರಿ ನಿಯಮ ಪಾಲಿಸುವಂತೆ ವಾಹನ ಚಾಲಕರಿಗೆ ಸೂಚನೆ ನೀಡುತ್ತಾರೆ.  


COMMERCIAL BREAK
SCROLL TO CONTINUE READING

ಒರಿಶಾದ ಭುವನೇಶ್ವರದಲ್ಲಿ ಸಂಚಾರ ನಿಯಮಗಳನ್ನು ಜಾರಿಗೆ ತರಲು 33 ವರ್ಷದ ಟ್ರಾಫಿಕ್ ಪೋಲೀಸ್ ಪ್ರತಾಪ್ ಚಂದ್ರ ಖಂದ್ವಾಲ್ ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ. ರಸ್ತೆ ಮಧ್ಯ ನಿಂತು ಸಂಚಾರಿ ಸೂಚನೆಗಳನ್ನು ಡ್ಯಾನ್ಸ್ ಮಾಡುತ್ತಾ ವಿಶೇಷ ಶೈಲಿಯಲ್ಲಿ ನೀಡುವ ಇವರು ಇದೀಗ ಜನರ ಪ್ರಮುಖ ಆಕರ್ಷಣೆಯಾಗಿದ್ದಾರೆ. 


ತಮ್ಮ ವಿಶೇಷ ಶೈಲಿಯ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಪ್ರತಾಪ್, "ಸಂಚಾರಿ ಸಂದೇಶಗಳನ್ನು ನಾನು ನೃತ್ಯದ ಚಲನೆಗಳ ಮೂಲಕ ನೀಡುತ್ತೇನೆ. ಆರಂಭದಲ್ಲಿ ಜನರು ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ವಿಶೇಷ ಶೈಲಿಯನ್ನು ಅಳವಡಿಸಿಕೊಂಡಿದ್ದೇನೆ. ಇದೀಗ ಜನ ಸಂಚಾರಿ ನಿಯಮ ಪಾಲಿಸುತ್ತಿದ್ದಾರೆ" ಎಂದಿದ್ದಾರೆ.