ನವದೆಹಲಿ : Viral Video : ಇತ್ತೀಚಿನ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ಬಹುಮಹಡಿ ಕಟ್ಟಡಗಳು ಸಾಮಾನ್ಯವಾಗಿವೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವ ಜನ ಬಟ್ಟೆ ಒಣಗಿಸಲು ಬಾಲ್ಕನಿಯನ್ನು ಬಳಸುತ್ತಾರೆ. ಆದರೆ ಈ ಹೊತ್ತಲ್ಲಿ ಬಹಳ ಜಾಗರೂಕರಾಗಿರಬೇಕು.  ಈ ಸಂದರ್ಭದಲ್ಲಿ ಆಗುವ ಸಣ್ಣ  ತಪ್ಪಿಗೂ ದೊಡ್ಡ ಬೆಲೆ ತೆರಬೇಕಾಗಿ ಬರಬಹುದು.  ಚೀನಾದ ಬಹುಮಹಡಿ ಕಟ್ಟಡದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ವಯಸ್ಸಾದ ಮಹಿಳೆ ಬಟ್ಟೆ ಒಣಗಿಸಲು ಬಾಲ್ಕನಿಗೆ ಬಂದಿದ್ದರು. ಬಟ್ಟೆ ಒಣಗಲು ಹಾಕುವ ವೇಳೆ ಕಾಲು ಜಾರಿದ್ದಾರೆ. 


COMMERCIAL BREAK
SCROLL TO CONTINUE READING

ಚೀನಾದಲ್ಲಿ ನಡೆದ ಆಘಾತಕಾರಿ ಘಟನೆ : 
ಕ್ಯಾಮೆರಾದಲ್ಲಿ (viral video) ಸೆರೆಯಾದ ಈ ದೃಶ್ಯವನ್ನು ನೋಡಿದರೆ  ಎದೆ ನಡುಗುತ್ತದೆ. ಬಟ್ಟೆ ಒಣಗಿಸಲು ಬಂದಿದ್ದ 82 ವರ್ಷದ ಮಹಿಳೆ ಬಾಲ್ಕನಿಯಲ್ಲಿ ನೇತಾಡುತ್ತಿರುವುದು ಕಾಣಿಸುತ್ತದೆ.  ೧೯ನೆ ಮಹಡಿಯಿಂದ ಆಯಾ ತಪ್ಪಿದವರು ಮಧ್ಯದಲ್ಲಿ ಸಿಲುಕಿ ಹಾಕಿ ಕೊಂಡಿದ್ದಾರೆ.  ಬಟ್ಟೆ ಒಣಗಿಸುವ ರಾಡ್ ಮಧ್ಯೆ ಸಿಲುಕಿಕೊಂಡಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಮಹಿಳೆಯು ದಕ್ಷಿಣ ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್‌ಝೌನಲ್ಲಿ ನಡೆದಿರುವ ಘಟನೆ. ಮಹಿಳೆ ತನ್ನ ಅಪಾರ್ಟ್‌ಮೆಂಟ್‌ನ 19 ನೇ ಮಹಡಿಯ ಬಾಲ್ಕನಿಯಲ್ಲಿ ಬಟ್ಟೆಗಳನ್ನು ಒಣಗಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದಾರೆ.


Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನನ್ನು ಎಳೆದಾಡಿ ಥಳಿಸಿದ ಮಹಿಳೆ, ವಿಡಿಯೋ ವೈರಲ್


ಸ್ವಲ್ಪದರಲ್ಲೇ ಪಾರಾದ 82 ವರ್ಷದ ಮಹಿಳೆ :
ಭಯಾನಕ ವೀಡಿಯೊದಲ್ಲಿ (danger video), ಮಹಿಳೆಯ ಎರಡೂ ಕಾಲುಗಳು 18 ನೇ ಮಹಡಿಯ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದು,  ದೇಹವು 17 ನೇ ಮಹಡಿಯ ಬಾಲ್ಕನಿಯಲ್ಲಿ ನೇತಾಡುತ್ತಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ರಕ್ಷಣಾ ತಂಡ 18ನೇ ಮಹಡಿ ಮತ್ತು 17ನೇ ಮಹಡಿಯಿಂದ ಕಾರ್ಯಾಚರಣೆ ನಡೆಸಿ  ಪ್ರಾಣ ಉಳಿಸಿದ್ದಾರೆ. ವ್ರುದ್ದೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 


 


19 ನೇ ಮಹಡಿಯಿಂದ ಜಾರಿ ಬಿದ್ದ ಮಹಿಳೆ :  
ಈ ಮಧ್ಯೆ, ವಿಡಿಯೋ ವೈರಲ್ (viral video)ಆಗಿದ್ದು, ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯನ್ನು ಜನರು ಶ್ಲಾಘಿಸಿದ್ದಾರೆ. ವೀಡಿಯೊವನ್ನು ವೀಕ್ಷಿಸಿದ ನಂತರ, ಬಳಕೆದಾರರು 'ಅಗ್ನಿಶಾಮಕ ದಳದವರು ಮಾಡಿದ ಅದ್ಭುತ ಕೆಲಸವನ್ನು ಕೊಂಡಾಡಿದ್ದಾರೆ .


ಇದನ್ನೂ ಓದಿ : Viral Video: ಹಾಡಹಗಲೇ ಬೈಕ್ ಗೆ ಅಡ್ಡಬಂದ ಚಿರತೆ, ಆಮೇಲೇನಾಯ್ತು ನೋಡಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.