Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ
Viral Video: ಸದ್ಯ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಅನೇಕ ವಿಡಿಯೋಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ನಾವು ಪ್ರತಿದಿನ ಇಲ್ಲಿ ಹಲವಾರು ಅದ್ಭುತ ವೀಡಿಯೊಗಳನ್ನು ನೋಡುತ್ತೇವೆ. ಕೆಲವೊಮ್ಮೆ ನಮಗೆ ನಂಬಲು ಸಾಧ್ಯವೇ ಆಗದಂತಹ ಕೆಲವು ವೀಡಿಯೊಗಳು ಕೂಡ ಇಲ್ಲಿ ಕಂಡು ಬರುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ನಾವು ಎಲ್ಲಾದರೂ ಪ್ರವಾಸಕ್ಕೆ ತೆರಳಬೇಕು ಎಂದು ಯೋಚಿಸಿದರೆ ಮೊದಲು ನಮ್ಮ ತಲೆಗೆ ಬರುವುದು ಕಡಲ ಕಿನಾರೆ. ನೀರಿನಲ್ಲಿ ಮೋಜು ಮಾಡುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕುತೂಹಲಕಾರಿ ವಿಷಯ ಎಂದರೆ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೂಡ ಜಲಕ್ರೀಡೆ ಎಂದರೆ ಇಷ್ಟವಾಗುತ್ತೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ, ದೈತ್ಯ ಹಾವಿನ (Snake Viral Video) ಜಲಕ್ರೀಡೆಯನ್ನು ನೀವು ಎಂದಾದರೂ ನೋಡಿದ್ದೀರಾ? ಇಂತಹದೊಂದು ಕುತೂಹಲಕಾರಿ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಹೌದು, ಸೋಶಿಯಲ್ ಮಿಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸುಮಾರು ಹತ್ತು ಅಡಿ ಉದ್ದದ ಬೃಹತ್ ಹಾವು ಕಡಲ ತೀರದಲ್ಲಿ ಅಲೆಗಳ ಮಧ್ಯೆ ಮೋಜು ಮಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ- Cat Viral Video: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆಕ್ಕು ವಾಷಿಂಗ್ ಮೆಷಿನ್‌ನಲ್ಲಿ ಏನು ಮಾಡಬಹುದು! ಈ ವೈರಲ್ ವಿಡಿಯೋ ನೋಡಿ
ಕೆಲವೇ ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ಸಮುದ್ರದ ದಡದಲ್ಲಿ ಅಲೆಗಳು ಏಳುತ್ತಿವೆ. ಒಂದು ದೈತ್ಯ ಹಾವು ಈ ಅಲೆಗಳ ಅದೇ ದಿಕ್ಕಿನಲ್ಲಿ ಚಲಿಸುತ್ತಿರುವುದು ಕಂಡು ಬರುತ್ತದೆ. ಸ್ವಲ್ಪ ಸಮಯದ ನಂತರ ಹಾವು ಸಮುದ್ರದ ಅಲೆಗಳಿಗೆ ಡಿಕ್ಕಿ ಹೊಡೆಯುತ್ತದೆ. ಈ ಸಮಯದಲ್ಲಿ, ನೀರಿನ ಹೆಚ್ಚಿನ ವೇಗವು ಹಾವನ್ನು ಹಿಂದಕ್ಕೆ ತಳ್ಳುತ್ತದೆ. ಆದಾಗ್ಯೂ ಹಾವು ಅಲೆಗಳಿಗೆ ಎದುರಾಗಿ ಸಾಗುವ ಹುಮ್ಮಸ್ಸನ್ನು ಕಾಣಬಹುದು.
ಈ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ನೋಡಿ:
ನೀರಿನ ಅಲೆಗಳ ಮುಂದೆ ನಿರ್ಭಯವಾಗಿ ನಿಂತಿರುವ ಹಾವನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವೀಡಿಯೊವನ್ನು Instagram ನಲ್ಲಿ royal_pythons_ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗಳಿಗೆ ನೆಟಿಜನ್‌ಗಳು ಉತ್ಸಾಹದಿಂದ ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದಾಗ್ಯೂ, ಈ ವಿಡಿಯೋವನ್ನು ಯಾವಾಗ ಎಲ್ಲಿ ಯಾವಾಗ ಚಿತ್ರಿಸಲಾಗಿದೆ ಎಂದು ತಿಳಿದುಬಂದಿಲ್ಲ.
ಇದನ್ನೂ ಓದಿ- Viral Video: ಹಾವಿಗೆ ಮುತ್ತಿಟ್ಟ ಮಹಿಳೆ, ಆಮೇಲೇನಾಯ್ತು ನೋಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.