ಪಿಲಿಭಿತ್: ಕೆಲವರು ತಮ್ಮ ತಲೆ ಕೂದಲನ್ನು ಸ್ವಚ್ಚವಾಗಿ ಇರಿಸಿಕೊಳ್ಳಲು ಶಾಂಪೂ, ಕ್ರೀಮ್, ಹೇರ್ ಆಯಿಲ್ ಹೀಗೆ ಸಾಕಷ್ಟು ಉತ್ಪನ್ನಗಳ ಮೊರೆ ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೋರ್ವ ಪೊಲೀಸ್ ಅಧಿಕಾರಿ ತಮ್ಮ ತಲೆ ಕೂದಲನ್ನು ಕೋತಿಯಿಂದ ಸ್ವಚ್ಛ ಮಾಡಿಸಿಕೊಂಡಿದ್ದಾರೆ. ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೆ ಇದು ಸತ್ಯ!


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದ ಪಿಲಿಭಿತ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಕೆಲಸದಲ್ಲಿ ಮಗ್ನರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ಭುಜದ ಮೇಲೆ ಕೋತಿಯೊಂದು ಕುಳಿತು ಅವರ ತಲೆಯಲ್ಲಿ ಹೇನು ಹಿಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಕೋತಿಯ ಯಾವುದೇ ಕಿರಿಕ್ಕಿಗೂ ಗಮನಕೊಡದ ಪೊಲೀಸ್ ಅಧಿಕಾರಿ, ತಲೆ ಕೆಡಿಸಿಕೊಳ್ಳದೆ ಕೆಲಸ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.