Viral Video: ದೇವರು ಎಲ್ಲೆಡೆ ಇರುತ್ತಾರೆ. ಆತನ ದಯೆ ಒಂದಿದ್ದರೆ ಎಂತಹದ್ದೇ ಪರಿಸ್ಥಿತಿಯಲ್ಲೂ ಏನೂ ಆಗುವುದಿಲ್ಲ. ಯಾವುದೇ ರೀತಿಯ ಕೆಡುಕೂ ಸಂಭವಿಸುವುದಿಲ್ಲ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಇದಕ್ಕೆ ಕನ್ನಡಿ ಹಿಡಿದಂತಿದೆ.


COMMERCIAL BREAK
SCROLL TO CONTINUE READING

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಕಾನ್‌ಸ್ಟೇಬಲ್ ಮುಂಬೈ ಸಮೀಪದ  ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರದಲ್ಲಿ ಸಿಲುಕಿಕೊಳ್ಳದಂತೆ ಗರ್ಭಿಣಿ ಮಹಿಳೆಯನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿ ಮಹಿಳೆಯೊಬ್ಬರು ರೈಲಿನಿಂದ ಕೆಳಗಿಳಿಯುವಾಗ ಈ ಘಟನೆ ನಡೆದಿದ್ದು, ತಕ್ಷಣ ದೇವರಂತೆ ಬಂದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಕಾನ್‌ಸ್ಟೇಬಲ್ ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.


ಇದನ್ನೂ ಓದಿ- Video Viral- ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಿಶೇಷ ರೀತಿಯಲ್ಲಿ ಪ್ರೇರೇಪಿಸುತ್ತಿರುವ ವ್ಯಕ್ತಿ ವಿಡಿಯೋ ವೈರಲ್


ವಾಸ್ತವವಾಗಿ, ಗರ್ಭಿಣಿ ಮಹಿಳೆಯೊಬ್ಬರು ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ನಲ್ಲಿ ನಿಂತಿದ್ದ ರೈಲನ್ನು ಹತ್ತಿದ್ದರು. ಆದರೆ, ತಾವು ಹೊರಡಬೇಕಿದ್ದ ರೈಲೇ ಬೇರೆ, ತಾವು ಹತ್ತಿರುವ ರೈಲೇ ಬೇರೆ ಎಂದು ತಿಳಿದೊಡನೆ ಆಕೆ ರೈಲು ಇಳಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತು. ಈ ಸಮಯದಲ್ಲಿ ರೈಲಿನಿಂದ ಇಳಿಯಲು ಯತ್ನಿಸುತ್ತಿದ್ದ ಗರ್ಭಿಣಿ ಮಹಿಳೆ ಕಾಲು ಜಾರಿದರು.  ಆ ಸಮಯದಲ್ಲಿ ಸಮೀಪದಲ್ಲಿದ್ದ ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಕಾನ್‌ಸ್ಟೇಬಲ್ ಎಸ್‌.ಆರ್. ಕಂದೇಕರ್ ​​ವೇಗವಾಗಿ ಕಾರ್ಯನಿರ್ವಹಿಸಿ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದರು. 


22-ಸೆಕೆಂಡ್ ವೀಡಿಯೋದಲ್ಲಿ (Viral Video), ಪ್ರಯಾಣಿಕರು ರೈಲಿನ ಬಳಿ ನಿಂತಿರುವುದನ್ನು ಕಾಣಬಹುದು. ಅದು ಚಲಿಸಲು ಪ್ರಾರಂಭಿಸುತ್ತದೆ ಮತ್ತು ಇದ್ದಕ್ಕಿದ್ದಂತೆ, ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದಳು. ಆದಾಗ್ಯೂ, ಅವಳು ತನ್ನನ್ನು ತಾನೇ ಸಮತೋಲನಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಗ್ಗರಿಸುತ್ತಾಳೆ. ಇದನ್ನು ನೋಡಿದ ಆರ್‌ಪಿಎಫ್ ಕಾನ್‌ಸ್ಟೇಬಲ್ ತಕ್ಷಣ ಆಕೆಯ ನೆರವಿಗೆ ಧಾವಿಸಿ, ಇತರ ಇಬ್ಬರು ಪುರುಷರ ಸಹಾಯದಿಂದ ಆಕೆಯನ್ನು ರಕ್ಷಿಸುತ್ತಾನೆ. ಇತರರು ಕೂಡ ಆಕೆಗೆ ಸಹಾಯ ಮಾಡಲು ಧಾವಿಸುವುದನ್ನು ಕಾಣಬಹುದು.


ಇದನ್ನೂ ಓದಿ- Video: ಮನೆಯಲ್ಲಿ ಅಡಗಿದ್ದ ನಾಗರಹಾವನ್ನು ನಾಯಿ ಮರಿಯಂತೆ ಎಳೆದುಕೊಂಡು ಹೋದ ಅಜ್ಜಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ