ನವದೆಹಲಿ: ಆಫೀಸ್ ನಲ್ಲಿ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ನೀವು ಹಲವು ಬಾರಿ ನೋಡಿರಬಹುದು. ಆದರೆ, ಇಂದು ನಾವು ನಿಮಗೆ ತೋರಿಸಲು ಹೊರಟಿರುವ ಒಂದು ವಿಡಿಯೋ ನೋಡಿ ನೀವು ನಿಬ್ಬೇರಗಾಗುವಿರಿ. ಈ ವಿಡಿಯೋದಲ್ಲಿ ವೇಲ್ಸ್ ಪನ್ ಇಂಡಿಯಾ ಲಿಮಿಟೆಡ್ ಕಂಪನಿಯ CEO ಡಾನ್ಸ್ ಮಾಡುತ್ತಿರುವುದು ಕಂಡುಬಂದಿದ್ದು, ಅವರ ಜೊತೆಗೆ ಕಂಪನಿಯ ಇತರೆ ನೌಕರರೂ ಕೂಡ ಹೆಜ್ಜೆ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಈ ವಿಡಿಯೋ ಅನ್ನು RPG ಎಂಟರ್ ಪ್ರೈಸಿಸ್ ಕಂಪನಿಯಲ್ಲಿ ಚೇರ್ಮನ್ ಆಗಿರುವ ಹರ್ಷ್ ಗೋಯಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ವಿಡಿಯೋ ವಿಕ್ಷೀಸಿರುವ ನೆಟ್ಟಿಗರು CEO ಅವರ ಈ ವರ್ತನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ಆಫೀಸ್ ನಲ್ಲಿನ ವಾತಾವರಣ ಇದೇ ರೀತಿ ಇರಬೇಕು. ಇದರಿಂದ ನೌಕರರು ಯಾವುದೇ ರೀತಿಯ ಒತ್ತಡ ಇಲ್ಲದೆ ಹೆಚ್ಚಿನ ಔಟ್ ಪುಟ್ ನೀಡಬಹುದು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.



ಇಲ್ಲಿ ವಿಶೇಷತೆ ಎಂದರೆ ವೇಲ್ಸ್ ಪನ್ ಇಂಡಿಯಾ ಲಿಮಿಟೆಡ್ ಕಂಪನಿಯ ಸಿಇಓ ಆಗಿರುವ ದೀಪಾಲಿ ಗೋಯಂಕಾ, ಖ್ಯಾತ ಹಿಂದಿ ಹಾಡು 'ಮುಕಾಬಲಾ' ಮೇಲೆ ಹೆಜ್ಜೆ ಹಾಕುತ್ತಿದ್ದು, ಅವರ ಜೊತೆ ಅವರ ಕಂಪನಿಯ ನೌಕರರೂ ಕೂಡ ಫುಲ್ ಮಸ್ತಿಯಲ್ಲಿ ಕುಣಿಯುತ್ತಿದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಜನರೂ ಕೂಡ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.