ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀ ಕೋರ್ಟ್ ಗುರುವಾರ ತೀರ್ಪು ನೀಡಿದ ಕೂಡಲೇ ದೇಶದೆಲ್ಲೆಡ ಸಂಭ್ರಮದ ವಾತಾವರಣ ಮನೆಮಾಡಿದೆ.


COMMERCIAL BREAK
SCROLL TO CONTINUE READING

ಹಲವು ವರ್ಷಗಳಿಂದ ಸಲಿಂಗಕಾಮ ವಿಚಾರವಾಗಿ ಕಾನೂನಿನ ಸಮ್ಮತಿಗಾಗಿ ಕಾದುಕುಳಿತಿದ್ದ ಜನತೆಯಲ್ಲಿ ಗುರುವಾರ ಹರ್ಷೋಲ್ಲಾಸ ತುಂಬಿ ತುಳುಕುತ್ತಿತ್ತು. ಇಷ್ಟು ವರ್ಷ ಸಲಿಂಗಕಾಮ ಅಪರಾಧ ಎಂದು ಹೇಳುತ್ತಿದ್ದವರು, ಸಲಿಂಗಕಾಮಿಗಳ ಬಗ್ಗೆ ತುಚ್ಚವಾಗಿ ಕಾಣುತ್ತಿದ್ದ ಸಮಾಜದ ಬಾಯಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಬೀಗ ಹಾಕಿದಂತಾಗಿದೆ. ಅಲ್ಲದೆ, ಈ ಸುಪ್ರೀಂ ಸಲಿಂಗಕಾಮದ ಪರವಾಗಿ ತೀರ್ಪು ತೀರ್ಪು ನೀಡುತ್ತಿದ್ದಂತೆಯೇ ನವದೆಹಲಿಯ ಹೋಟೆಲ್ ಲಲಿತ್ ಸಿಬ್ಬಂದಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.


ಲಲಿತ್​ ಹೋಟೆಲ್​ ಗ್ರೂಪ್​'ನ ಎಕ್ಸಿಕ್ಯೂಟಿವ್​ ಡೈರೆಕ್ಟರ್​ ಕೇಶವ್​ ಸೂರಿ ಪ್ರಮುಖ ಎಲ್​ಜಿಬಿಟಿ ಕಾರ್ಯಕರ್ತನಾಗಿದ್ದು, ಹೋಟೆಲ್​ ಸಿಬ್ಬಂದಿ ಕಾಮನಬಿಲ್ಲಿನ ಬಣ್ಣಗಳ ಸ್ಕಾರ್ಫ್'ಗಳನ್ನು ಕುತ್ತಿಗೆಗೆ ಮತ್ತು ಸೊಂಟಕ್ಕೆ ಕಟ್ಟಿಕೊಂಡು ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಈ ವೀಡಿಯೋವನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.