ನವದೆಹಲಿ:ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ಯಾರು, ಯಾವ ಕಾರಣಕ್ಕೆ ಮತ್ತು ಹೇಗೆ ವೈರಲ್ ಆಗುತ್ತಾರೆ ಎಂದು ಹೇಳುವುದು ಅಸಾಧ್ಯ. ಕಳೆದ ಕೆಲ ದಿನಗಳಿಂದ ವಿಡಿಯೋವೊಂದು ಇಂಟರ್ನೆಟ್ ಮೇಲೆ ಹರಿದಾಡಲಾರಂಭಿಸಿದ್ದು, ನೀವು ಕೂಡ ಅದನ್ನು ಇಷ್ಟಪಡುವುದರಲ್ಲಿ ಎರಡು ಮಾತಿಲ್ಲ.  ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ತನ್ನ ನಿತ್ಯದ ಸಂಗೀತ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ವೇಳೆ ಅವರ ಮುದ್ದಿನ ನಾಯಿ ಅವರಿಗೆ ಸಾಥ್ ನೀಡುತ್ತಿದೆ. ಈ ಹಾಡು ನಿಮಗೆ ಹಿಮೇಶ್ ರೇಶಮಿಯಾ ಅಭಿನಯದ ಅವರ ಮುಂಬರುವ 'ಹ್ಯಾಪಿ, ಹಾರ್ಡಿ ಅಂಡ್ ಹೀರ್' ಚಿತ್ರದ ಹಾಡು 'ತೆರಿ ಮೇರಿ ಕಹಾನಿ' ಜ್ನಾಪಿಸಲಿದೆ. ವಿಡಿಯೋದಲ್ಲಿ ಸುಬೀರ್ ಖಾನ್ ಮತ್ತು ಅವರ ಮುದ್ದಿನ ನಾಯಿ 'ಬಾಘಾ' ಒಂದೇ ಸಲಕ್ಕೆ ಈ ಹಾಡು ಹಾಡುತ್ತಿರುವುದು ಕಂಡುಬರುತ್ತಿದೆ.


COMMERCIAL BREAK
SCROLL TO CONTINUE READING

ಮೂರು ದಿನಗಳ ಹಿಂದೆ ಸುಬೀರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತಾದ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸುಬೀರ್ ತಮ್ಮ ಹಾರ್ಮೋನಿಯಂ ಹಿಡಿದು ರಾನು ಮಂಡಲ್ ಹಾಡಿರುವ ಹಾಡಿನ ರಿಯಾಜ್ ಮಾಡುತ್ತಿದ್ದಾರೆ. ಈ ವೇಳೆ ಅವರ ಮುದ್ದಿನ ನಾಯಿ ಅವರ ಪಕ್ಕಕ್ಕೆ ಕುಳಿತುಕೊಂಡಿದ್ದು, ಹಾಡಿಗೆ ತನ್ನ ಧ್ವನಿ ಕೂಡ ನೀಡುತ್ತಿದೆ.ಈ ಹಾಡನ್ನು ಹಂಚಿಕೊಂಡಿರುವ ಸುಬೀರ್, "ಇಂದು ಬೆಳಗ್ಗೆ ನಾನು ಮತ್ತು ನನ್ನ ಮುದ್ದಿನ ನಾಯಿ ಬಾಘಾ ಹಾಡಿನ ಅಭ್ಯಾಸ ನಡೆಸಿದ್ದೇವೆ" ಎಂದು ಬರೆದುಕೊಂಡಿದ್ದಾರೆ.



 




ಇದುವರೆಗೆ ಈ ಸ್ವಾರಸ್ಯಕರ ವಿಡಿಯೋವನ್ನು ಸುಮಾರು 20 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಸುಬೀರ್ ಮತ್ತು ಬಾಘಾ ಅವರ ಈ ವಿಡಿಯೋವನ್ನು ಸುಮಾರು 59000 ಜನರು ಶೇರ್ ಕೂಡ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೀಗ ಈ ವಿಡಿಯೋವನ್ನು ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳ ಮೇಲೂ ಕೂಡ ಹಂಚಿಕೊಳ್ಳಲಾಗುತ್ತಿದೆ. ಟ್ವಿಟ್ಟರ್ ಮೇಲೂ ಕೂಡ ವಿಡಿಯೋಗೆ ಈ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.