ನವದೆಹಲಿ: ಭಾಂಗ್ರಾ ನೃತ್ಯಕ್ಕೆ ಭಾರತೀಯ ಸೈನಿಕರು ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಭಾರತ-ಪಾಕ್ ಗಡಿಯ ಸಮೀಪದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ಮಾಜಿ ವೀರೇಂದ್ರ ಸೆಹ್ವಾಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ, ಇಂಡೋ-ಪಾಕ್ ಗಡಿಗೆ ಹತ್ತಿರವಿರುವ ಸೈನಿಕರ ಭಂಗ್ರಾ ಅದ್ಭುತವಾಗಿದೆ ಎಂದು ಅವರು ಕ್ಯಾಪ್ಶನ್ ಬರೆದಿದ್ದಾರೆ. ಆದರೆ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇಂತಹ ಸವಾಲಿನ ಸಂದರ್ಭಗಳಲ್ಲಿಯೂ ಈ ಜನರು ಎಷ್ಟು ಸಂತೋಷವಾಗಿದ್ದಾರೆ. ಅವರ ಧೈರ್ಯಕ್ಕೆ ನನ್ನ ನಮನ ಎಂದು ವಿರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ವೀಡಿಯೊಗೆ ಇದುವರೆಗೆ 2 ಲಕ್ಷ 51 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ದೊರೆತಿವೆ. ಅಷ್ಟೇ ಅಲ್ಲ ಕಾಮೆಂಟ್ಸ್ ಹಾಗೂ ಲೈಕ್ ಗಳ ಸರಣಿ ಕೂಡ ಮುಂದುವರೆದಿದೆ. ಈ ವೀಡಿಯೊದಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಜವಾನರನ್ನು ಮತ್ತು ಅವರ ಉತ್ಸಾಹವನ್ನು ಹೊಗಳಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಮಾಧ್ಯಮ ಬಳಕೆದರರೊಬ್ಬರು, "ವೀರ ಯೋಧರಿಗೆ ಜೈ, ಭಾರತ ಮಾತೆಗೆ ಜೈ' ಎಂದಿದ್ದಾರೆ. ಮತ್ತೋರ್ವ ಬಳಕೆದಾರರು - "ಇವರು ಎಲ್ಲೇ ಇದ್ದರೂ ಕೂಡ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆ" ಎಂದು ಬರೆದುಕೊಂಡಿದ್ದಾರೆ.



ಈ ವಿಡಿಯೋದಲ್ಲಿ ಗಡಿಭಾಗದಲ್ಲಿ ಸುಮಾರು 4 ರಿಂದ 5 ಸೈನಿಕರಿದ್ದು, ಇವರು ಖ್ಯಾತ ಪಂಜಾಬಿ ಸೂಪರ್ ಹಿಟ್ ಸಾಂಗ್ ಆಗಿರುವ 'ದಾರು ಬದ್ನಾಮ್ ಕರ್ ದಿ' ಹಾಡಿಗೆ ಭಾಂಗ್ರ ನೃತ್ಯ ಪ್ರದರ್ಶಿಸುವುದನ್ನು ನೀವು ಗಮನಿಸಬಹುದು. ಈ ಸುಂದರ ವಿಡಿಯೋ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಅಪಾರ ಸಂಖ್ಯೆಯಲ್ಲಿ ಶೇರ್ ಮಾಡುತ್ತಿದ್ದು, ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಗಡಿಭಾಗದಲ್ಲಿ ಭಾರತೀಯ ಸೇನಾ ಜವಾನರು ಐಸ್ ನಿಂದ ತಯಾರಿಸಲಾದ ಕೇಕ್ ಕಟ್ ಮಾಡಿರುವ ಕುರಿತಾದ ವಿಡಿಯೋ ಭಾರಿ ವೈರಲ್ ಆಗಿತ್ತು.