ಈ Airlinesನಲ್ಲಿ ನೀವು ಟಿಕೆಟ್ ಬುಕ್ ಮಾಡಿದ್ದರೆ `ಫ್ಲೈಟ್ ಮಿಸ್` ಆದರೂ ಚಿಂತೆಯಿಲ್ಲ!
ಆಸನ ಲಭ್ಯವಿರುವ ವೇಳೆ ವಿಸ್ತಾರ ಏರ್ಲೈನ್ಸ್ ನಿಮಗೆ ಹೆಚ್ಚುವರಿ ಶುಲ್ಕವಿಲ್ಲದೆ ಮುಂದಿನ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ.
ನವದೆಹಲಿ: ದೇಶೀಯ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸುದ್ದಿಯಿಂದ ಅನುಕೂಲವಾಗಲಿದೆ. ಅದರಲ್ಲೂ ದೆಹಲಿ-ಎನ್ಸಿಆರ್ ನಲ್ಲಿ ವಾಸಿಸುತ್ತಿದ್ದರೆ, ನೀವು ದೆಹಲಿ ಏರ್ಪೋರ್ಟ್(ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ನಿಂದ ಪ್ರಯಾಣಿಸುವುದಾದರೆ, ನಿಮಗೆ ಫ್ಲೈಟ್ ಮಿಸ್ ಆದರೂ ಗಾಬರಿಯಾಗುವ ಅಗತ್ಯವಿಲ್ಲ. ಏಕೆಂದರೆ, ಆಸನ ಲಭ್ಯವಿರುವ ವೇಳೆ ವಿಸ್ತಾರ ಏರ್ಲೈನ್ಸ್ ನಿಮಗೆ ಹೆಚ್ಚುವರಿ ಶುಲ್ಕವಿಲ್ಲದೆ ಮುಂದಿನ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ.
ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಗುರ್ಗಾಂವ್ ನಿಂದ ದೆಹಲಿಗೆ ಬರುವ ವೇಳೆ ವಾಹನ ಹೆಚ್ಚಳದಿಂದಾಗಿ ಸಂಚಾರದ ವೇಳೆ ಉಂಟಾಗುವ ಜಾಮ್ ನಿಂದಾಗಿ ಕೆಲವರು ಫ್ಲೈಟ್ ಮಿಸ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿರುವ ಏರ್ಲೈನ್ಸ್ ಇಂತಹ ಸೌಲಭ್ಯವನ್ನು ಘೋಷಿಸಿದೆ. ಫ್ಲೈಟ್ ಮಿಸ್ ಆದ ಗ್ರಾಹಕರಿಗೆ ಮುಂದಿನ ವಿಮಾನದಲ್ಲಿ ಆಸನ ಲಭ್ಯತೆ ಪ್ರಕಾರ ಆಸನ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಏರ್ಲೈನ್ಸ್ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ವಿಸ್ತಾರಾ ಏರ್ಲೈನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.
ಈ ಮೊದಲು, ಸ್ವಾತಂತ್ರ್ಯ ದಿನದಂದು ಭಿಗಿ ಭದ್ರತಾ ಕ್ರಮಗಳ ಕಾರಣದಿಂದಾಗಿ ಗ್ರಾಹಕರು ಚೆಕ್-ಇನ್ಗಾಗಿ ಭದ್ರತಾ ಪರಿಶೀಲನೆಗಾಗಿ ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ಗ್ರಾಹಕರು ಮುಂಚಿತವಾಗಿ ಚೆಕ್-ಇನ್ ಆಗಬೇಕೆಂದು ವಿಮಾನಯಾನವು ಮನವಿ ಮಾಡಿತ್ತು.