ನವದೆಹಲಿ: ಜವಾಹರಲಾಲ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಮತ ಎಣಿಕೆ ವೇಳೆ ಎಬಿವಿಪಿ ದಾಂದಲೆ ಮಾಡಿದ್ದರಿಂದಾಗಿ ತಾತ್ಕಾಲಿಕವಾಗಿ ಮತ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

 ಸೈನ್ಸ ಸ್ಕೂಲ್ ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಬಗ್ಗೆ ತಮ್ಮ ಏಜೆಂಟ್ ಗೆ ತಿಳಿಸಿಲ್ಲ ವೆಂದು ಎಬಿವಿಪಿ ಆರೋಪ ಮಾಡಿದೆ.ಈಗ ಈ ಕುರಿತಾಗಿ ಜೆಎನ್ಯು ಚುನಾವಣಾ ಕಮಿಟಿಯು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ತಾತ್ಕಾಲಿಕವಾಗಿ ಮತ ಎಣಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.



ಇನ್ನೊಂದೆಡೆ ಎಡ ವಿದ್ಯಾರ್ಥಿ ಸಂಘಟನೆಗಳ ಆರೋಪದಂತೆ " ಎಬಿವಿಪಿ ಸಂಘಟನೆಯು ಬೆಳಗ್ಗೆ ನಾಲ್ಕು ಘಂಟೆಗೆ ಸ್ಕೂಲ್ ಆಫ್ ಇಂಟರ್ನ್ಯಾಷನಲ್  ಕಟ್ಟಡದ ಗಾಜುಗಳನ್ನು ಪುಡಿ ಪುಡಿ ಮಾಡಿದೆ.ಆದ್ದರಿಂದ ಈಗ ಚುನಾವಣಾ ಸಮಿತಿಯು ಅನಿರ್ಧಿಷ್ಟ ಸಮಯದವರಗೆ  ಮತ ಎಣಿಕೆ  ಪ್ರಕ್ರಿಯೆಯನ್ನು ಬಂದ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಮುಂದುವರೆದು ಎಬಿವಿಪಿ ಏಜೆಂಟ್ ಗೆ ಮತ ಎಣಿಕೆ ವಿಚಾರವಾಗಿ ತಿಳಿಸಲಾಗಿತ್ತು, ಆದರೆ ಅವರು ಸರಿಯಾದ ಸಮಯಕ್ಕೆ ಹಾಜರಿರಲಿಲ್ಲ ಎಂದು ತಿಳಿಸಿದ್ದಾರೆ. 


ಇನ್ನೊಂದೆಡೆಗೆ ಜೆಎನ್ಯು ಎಬಿವಿಪಿ ಅಧ್ಯಕ್ಷ  ಮಾತನಾಡಿ" ನಾವು  ಶಾಂತಿಯುತವಾಗಿ ಚುನಾವಣಾ  ಸಮಿತಿ ಎಡ ವಿದ್ಯಾರ್ಥಿ ಸಂಘಟನೆ ಪರವಾಗಿ ವರ್ತಿಸುತ್ತಿದೆ ಎಂದು  ಪ್ರತಿಭಟಿಸುತ್ತಿದ್ದೆವು ಆದರೆ ನಾವು ಯಾವುದೇ ಗಲಭೆಯನ್ನು ಸೃಷ್ಟಿಸಿಲ್ಲ ಎಂದು ತಿಳಿಸಿದರು.


ಜೇನ್ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡ ವಿದ್ಯಾರ್ಥಿ ಒಕ್ಕೂಟ, ಬಿರ್ಸಾ ಅಂಬೇಡ್ಕರ್ ಪುಲೆ ವಿದ್ಯಾರ್ಥಿ ಸಂಘ ಮತ್ತು ಎನ್ಎಸ್ಯುಐ ಮತ್ತು ಎಬಿವಿಪಿ ಸಂಘಟನೆಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.