ನವದೆಹಲಿ: ಛತ್ತೀಸ್‌ಗಢದ ದಾಂತೇವಾಡ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ. ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ. ನಕ್ಸಲೈಟ್ ಪೀಡಿತ ಪ್ರದೇಶವಾದ ಕಾರಣ, ಈ ಕ್ಷೇತ್ರದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಮತ್ತು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 


COMMERCIAL BREAK
SCROLL TO CONTINUE READING

ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು, ಭದ್ರತಾ ಪಡೆಯ 57 ಹೆಚ್ಚುವರಿ ಪಡೆಗಳನ್ನು ಇಲ್ಲಿಗೆ ಕಳುಹಿಸಲಾಗಿದೆ. ಡಿಆರ್‌ಜಿ, ಸಿಆರ್‌ಪಿಎಫ್ ಮತ್ತು ಎಸ್‌ಟಿಎಫ್ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.


ದಾಂತೇವಾಡದಲ್ಲಿ ಮತದಾನಕ್ಕಾಗಿ ಒಟ್ಟು 273 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 1 ಲಕ್ಷ 88 ಸಾವಿರ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಈ ಸ್ಥಾನದಿಂದ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ಬಿಜೆಪಿಯ ಶಾಸಕ ಭೀಮಾ ಮಾಂಡವಿ ಅವರ ಪತ್ನಿ ಓಜಸ್ವಿ ಮಾಂಡವಿ ಮತ್ತು ಕಾಂಗ್ರೆಸ್ ನ ದೇವತಿ ಕರ್ಮ ಕಣದಲ್ಲಿದ್ದಾರೆ. ದೇವತಿ ಕರ್ಮ ಬಸ್ತರ್ ಟೈಗರ್ ಹೆಸರಿನ ಪ್ರಸಿದ್ಧ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಮಹೇಂದ್ರ ಕರ್ಮ ಅವರ ಪತ್ನಿ. ಈ ಇಬ್ಬರೂ ಪ್ರಬಲ ಆಭ್ಯರ್ಥಿಗಳಾದ ಕಾರಣ ಈ ಕ್ಷೇತ್ರದಲ್ಲಿ ಸ್ಪರ್ಧೆ ತುಂಬಾ ಕಠಿಣವಾಗಿದೆ.


ಶಾಸಕ ಭೀಮಾ ಮಾಂಡವಿ ಅವರ ನಿಧನದ ನಂತರ ದಂತೇವಾಡ ವಿಧಾನಸಭೆ ಸ್ಥಾನ ಖಾಲಿಯಾಗಿತ್ತು. ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಶಾಸಕರು ನಕ್ಸಲರಿಂದ ಹತ್ಯೆಗೀಡಾದರು. ಈ ಸ್ಫೋಟದಲ್ಲಿ ದಿವಂಗತ ಶಾಸಕ ಭೀಮಾ ಮಾಂಡವಿ ಅವರೊಂದಿಗೆ ಅವರ ಚಾಲಕ ಮತ್ತು ಮೂವರು ಸೈನಿಕರು ಹುತಾತ್ಮರಾಗಿದ್ದರು. ವಾಸ್ತವವಾಗಿ, ದಂತೇವಾಡ-ಸುಕ್ಮಾ ರಸ್ತೆಯ ನಕುಲ್ನರ್ ಬಳಿ ಶಾಸಕ ಭೀಮಾ ಮಾಂಡವಿ ಅವರ ವಾಹನವನ್ನು ನಕ್ಸಲರು ಗುರಿಯಾಗಿಸಿಕೊಂಡಿದ್ದರು, ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ವಾಹನವು 200 ಮೀಟರ್ ದೂರದಲ್ಲಿ ಬಿದ್ದಿತು.