`ವೃಂದಾವನ`ದಲ್ಲಿ ವಿಧವೆಯರಿಗೆ ಹೋಳಿ ಸಂಭ್ರಮ
ನವದೆಹಲಿ: ಉತ್ತರಪ್ರದೇಶದ ವೃಂದಾವನದಲ್ಲಿ ಬಗೆ ಬಗೆಯ ಬಣ್ಣಗಳು ಮತ್ತು ಹೂವುಗಳೊಂದಿಗೆ ವಿಧವೆಯರು ಹೋಳಿಹಬ್ಬವನ್ನು ಆಚರಿಸಿ ಸಂಭ್ರಮ ವ್ಯಕ್ತಪಡಿಸಿದರು.
ವೃಂದಾವನವು ಉತ್ತರಪ್ರದೇಶದ ಅತ್ಯಂತ ಪವಿತ್ರವಾದ ಪಟ್ಟಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇಲ್ಲಿ ಹೋಳಿ ಹಬ್ಬವು ಸಾಮಾನ್ಯವಾಗಿ ಒಂದು ವಾರಕ್ಕೂ ಮೊದಲು ಆಚರಿಸಲ್ಪಡುತ್ತದೆ.
ಈಗ ವೃಂದಾವನದಲ್ಲಿನ ಹೋಳಿ ಆಚರಣೆಯ ಕುರಿತಾಗಿ ಪ್ರತಿಕ್ರಯಿಸಿರುವ ಸುಲಭ ಇಂಟರ್ ನ್ಯಾಷನಲ್ ಸ್ಥಾಪಕರಾಗಿರುವ ಡಾ. ಬಿಂದೆಶ್ವರಿ ಪಾಠಕ್ " ಈ ಹಿಂದೆ ಸಂಪ್ರದಾಯದ ಪ್ರಕಾರ, ವಿಧವೆಯರಿಗೆ ಬಣ್ಣವನ್ನು ಮುಟ್ಟಲು ಅವಕಾಶ ನೀಡುತ್ತಿರಲಿಲ್ಲ ಆದರೆ ಈಗ ಆ ಸಂಪ್ರದಾಯಕ್ಕೆ ಕೊನೆ ಹಾಡಿ ವಿಧವೆಯರಿಗೆ ಹೋಳಿ ಆಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ವೃಂದಾವನದ ಪಟ್ಟಣದಲ್ಲಿ ವಿಧವೆಯರು 2012 ರಿಂದ ಹೋಳಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರ ಭಾಗವಾಗಿ ಇಲ್ಲಿನ ಎಲ್ಲ ವಿಧವೆಯರು ಕೃಷ್ಣನ ಜೊತೆ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಎಂದು ಅವರು ತಿಳಿಸಿದರು.