ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಿವಿಪ್ಯಾಟ್ ಮೂಲಕ ಮತ ಎಣಿಕೆ ಮಾಡಲಾಗುವುದು. ಎಂದು ಚುನಾವಣಾ ಆಯೋಗ ತಿಳಿಸಿದೆ.


COMMERCIAL BREAK
SCROLL TO CONTINUE READING

ಪ್ರಾಯೋಗಿಕವಾಗಿ 10 ವಿಧಾನಸಭಾ ಕ್ಷೇತ್ರದಲ್ಲಿ  ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಆಯೋಗ ಹೇಳಿದೆ. ಇತ್ತೀಚಿಗೆ ಹಲವಾರು ರಾಜಕೀಯ ಪಕ್ಷಗಳು ಇವಿಎಮ್ ಗೆ ಸಂಶಯ ವ್ಯಕ್ತಪಡಿಸಿರುವ ಕಾರಣ ಚುನಾವಣಾ ಆಯೋಗವು ಇಂತಹ ಸಂಶಯಗಳನ್ನು ಹೋಗಲಾಡಿಸಲು ಗುಜರಾತಿನ 10 ಕ್ಷೇತ್ರಗಳಲ್ಲಿ ಅದರಲ್ಲೂ ವಿಸ್ನಗರ್, ,ಬೆಚಾರಜಿ , ಮೊಡಾಸ, ವೆಜಳಪುರ್, ವಾಟ್ವಾ, ಜಮಲಾಪುರ್ -ಖಾಡಿಯಾ,ಸಾವಿಲ್ ಕ್ಷೇತ್ರಗಳಲ್ಲಿ ವಿವಿಪ್ಯಾಟ್ ಮೂಲಕ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಅಭಿಪ್ರಾಯ ಪಟ್ಟಿದೆ. 


ಇತ್ತೀಚಿಗೆ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗವನ್ನು ಮೋದಿಯ ಸಚಿವಾಲಯದಂತೆ ವರ್ತಿಸುತ್ತಿದೆ ಎಂದು ಆರೋಪಿಸಿತ್ತು ಅಲ್ಲದೆ ವಿವಿಧ ರಾಜಕೀಯ ಪಕ್ಷಗಳ ಕೂಡಾ ಆಯೋಗದ ಮೇಲೆ ನೇರ ಆರೋಪವನ್ನು ಮಾಡಿದ್ದವು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಬಹುದು.