ನವದೆಹಲಿ:  ಭಾರತದ ಅತೀ ದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್'ಕಾರ್ಟ್'ನ ಶೇ.77 ಷೇರುಗಳನ್ನು ಅಮೆರಿಕಾದ ವಾಲ್'ಮಾರ್ಟ್ ಸಂಸ್ಥೆ ಖರೀದಿಸಿದೆ. 


COMMERCIAL BREAK
SCROLL TO CONTINUE READING

ವಿಶ್ವದ ಚಿಲ್ಲರೆ ಮಾರಾಟದ ದೈತ್ಯ ಸಂಸ್ಥೆ ಅಮೆರಿಕಾದ  ವಾಲ್'ಮಾರ್ಟ್ 16 ಬಿಲಿಯನ್ ಡಾಲರ್(13 ಸಾವಿರ ಕೋಟಿ)ಗೆ ಖರೀದಿಸಿದ್ದು, ಈ ಒಪಂದಕ್ಕೆ ಎರಡೂ ಸಂಸ್ಥೆಗಳು ಸಹಿ ಹಾಕಿವೆ. 2013 ರಲ್ಲಿ ಕಂಪನಿ ಭಾರತಕ್ಕೆ ಪ್ರವೇಶಿಸಿದಾಗಿನಿಂದ ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದ್ದು, ಅಮೆಜಾನ್​ ಕಂಪನಿಯನ್ನೂ ಸೆಡ್ಡು ಹೊಡೆದು ಫ್ಲಿಪ್'ಕಾರ್ಟ್ ಕಂಪನಿಯ ಶೇ.77 ಷೇರುಗಳನ್ನು ಖರೀದಿಸಿದ್ದು, ಉಳಿದ ಷೇರುಗಳನ್ನು ಫ್ಲಿಪ್‌ಕಾರ್ಟ್‌ನ ಸಹ–ಸಂಸ್ಥಾಪಕ ಬಿನ್ನಿ ಬನ್ಸಾಲ್‌ ಸೇರಿದಂತೆ ಇತರರು ಹೊಂದಿರಲಿದ್ದಾರೆ. 


ಅಮೆರಿಕಾದ ವಾಲ್‌ಮಾರ್ಟ್‌ ಸಂಸ್ಥೆ ಇದುವರೆಗೂ ಮಾಡಿಕೊಂಡಿರುವ ದೊಡ್ಡ ಡೀಲ್‌ ಇದಾಗಿದೆ. 2007ರಲ್ಲಿ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್‌ ಆರಂಭವಾಗಿದ್ದು, ಇದಾದ ಕೆಲವೇ ವರ್ಷಗಳಲ್ಲಿ ದೊಡ್ಡ ಸಂಸ್ಥೆಯಾಗಿ ಫ್ಲಿಪ್‌ಕಾರ್ಟ್‌ ಹೊರಹೊಮ್ಮಿತ್ತಲ್ಲದೆ, ಅಮೆಜಾನ್'ಗೂ ಸಹ ತೀವ್ರ ಪೈಪೋಟಿ ನೀಡಿತ್ತು.