ನವದೆಹಲಿ:ನೀವೂ ಒಂದು ವೇಳೆ ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದ್ದರೆ ಅಥವಾ ಹೊಸ ವರ್ಷದಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ತಯಾರಿ ನಡೆಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ನೀವು ತಿಳಿದಿರಬೇಕು. ಇತ್ತೀಚೆಗೆ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮಕ್ಕಳ ಹೆಸರಿನಲ್ಲಿ ಮಾಡುವ ಹೂಡಿಕೆ ನಿಯಮಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ತಂದಿದೆ.


COMMERCIAL BREAK
SCROLL TO CONTINUE READING

ಮ್ಯೂಚುವಲ್ ಫಂಡ್ ಸಹಾಯವಾಣಿಯಲ್ಲಿ ಈ ಬದಲಾವಣೆಗಳನ್ನು ನಾವು ಚರ್ಚಿಸುತ್ತಿದ್ದೇವೆ ಎಂದು ಹಣಕಾಸು ತಜ್ಞ ವಿಕಾಸ್ ಪುರಿ ಸೆಬಿಯ ಬದಲಾವಣೆಗಳ ಬಗ್ಗೆ ವಿವರ ನೀಡಿದ್ದಾರೆ.


ನಿಯಮಗಳ ಬದಲಾವಣೆ
ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಬಗ್ಗೆ ನಿಯಮಗಳನ್ನು ಬದಲಾಯಿಸಲಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಈ ಬದಲಾವಣೆಗಳನ್ನು ಮಾಡಿದೆ. ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡುವುದನ್ನು ಪಾರದರ್ಶಕಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಸೆಬಿ ಹೇಳಿದೆ.


ಮಕ್ಕಳಿಗಾಗಿಯೇ ಸಿದ್ಧಪಡಿಸಿರುವ  'ಮಕ್ಕಳ ಮ್ಯೂಚುಯಲ್ ಫಂಡ್‌'ನಲ್ಲಿ ಹೂಡಿಕೆ ಮಾಡಲಾಗುತ್ತದೆ. ತಂದೆ-ತಾಯಿ ಅಥವಾ ಪೋಷಕರು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ. ಮಕ್ಕಳ ಖಾತೆಯಿಂದ ಮಾತ್ರ ಹೂಡಿಕೆಗೆ ಹಣ ಪಾವತಿಸಲಾಗುತ್ತದೆ. ಗಾರ್ಡಿಯನ್‌ ಆದವರು ತಮ್ಮ ಜಂಟಿ ಖಾತೆಯಿಂದ ಹಣ ಪಾವತಿಸಬಹುದು.


ಹೊಸ ಬದಲಾವಣೆಯಡಿಯಲ್ಲಿ, ಸದ್ಯ ಅಸ್ತಿತ್ವದಲ್ಲಿರುವ ಹೂಡಿಕೆದಾರರ ಮೇಲೂ ಪರಿಣಾಮ ಬೀರಲಿದೆ. ಎಎಂಸಿಗಳು (ಆಸ್ತಿ ನಿರ್ವಹಣಾ ಕಂಪನಿ) ಪೇ- ಔಟ್ ಬ್ಯಾಂಕ್ ಖಾತೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಲಿದೆ. ನಿಯಮಗಳ ಪ್ರಕಾರ, ಬದಲಾವಣೆಯ ನಂತರವೇ ರಿಡಂಪ್ಶನ್ ಸಾಧ್ಯ ಎನ್ನಲಾಗಿದೆ.


ಕೆವೈಸಿಯಲ್ಲಿ ಬದಲಾವಣೆ
ಕೆವೈಸಿಗೆ ಸಂಬಂಧಿಸಿದಂತೆ ಸೆಬಿ ದೊಡ್ಡ ಬದಲಾವಣೆ ಮಾಡಿದೆ. ಸೇಬಿ ಪ್ರಕಾರ ಮೈನರ್ ಗಳು ಮೇಜರ್ ಗಳಾದಾಗ  ಕೆವೈಸಿ ವಿವರಗಳನ್ನು ನೀಡಬೇಕಾಗುತ್ತದೆ. ಅಲ್ಲದೆ,  ಅವರ ಹೊಸ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಅದರಲ್ಲಿ ಸೇರಿಸುವುದು ಇಲ್ಲಿ ಅನಿವಾರ್ಯವಾಗಿದೆ. ಹೂಡಿಕೆದಾರರು ಬ್ಯಾಂಕಿನ ಚೆಕ್ ಅನ್ನು ಠೇವಣಿ ಇಡಬೇಕಾಗುತ್ತದೆ. ಚಿಕ್ಕವರು ಪ್ರೌಢರಾದಾಗ ಅವರ ಸ್ಟೇಟಸ್ ಕೂಡ ಬದಲಾಯಿಸುವುದು ಮುಖ್ಯ. ಅವರ ಸ್ಟೇಟಸ್ ಬದಲಾಗುವವರೆಗೆ ಅವರು ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.


ಎಸ್‌ಐಪಿ ಮತ್ತು ಎಸ್‌ಟಿಪಿ
ಹೊಸ ನಿಯಮದ ನಂತರ ಎಸ್‌ಐಪಿ ಮತ್ತು ಎಸ್‌ಟಿಪಿಗಳಲ್ಲಿಯೂ ಕೂಡ ಬದಲಾವಣೆ ಇರಲಿದೆ. ಇದಕ್ಕಾಗಿ ಎಎಂಸಿಗಳು ಸಿಸ್ಟಮ್ ಕಂಟ್ರೋಲ್ ಸಿದ್ಧಪಡಿಸಬೇಕು. ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ), ಎಸ್‌ಟಿಪಿ ಮತ್ತು ಎಸ್‌ಡಬ್ಲ್ಯೂಪಿ (ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ) ಗೆ ಸ್ಟ್ರಾಂಡಿಂಗ್ ಸೂಚನೆಗಳನ್ನು ನೀಡಲಾಗಿದೆ. ಮೈನರ್ ಗಳು ಮೇಜರ್ ಆದಾಗ ಹೂಡಿಕೆ ಪಾವತಿಯನ್ನು ನಿಲ್ಲಿಸಲಾಗುತ್ತದೆ. ಸ್ಟೇಟಸ್ ಬದಲಾವಣೆಯ ಬಳಿಕ ಮಾತ್ರವೇ ಎಸ್‌ಐಪಿ, ಎಸ್‌ಟಿಪಿ ಮತ್ತು ಎಸ್‌ಡಬ್ಲ್ಯೂಪಿ ಮತ್ತೆ ಸಕ್ರೀಯಗೊಳ್ಳಲಿವೆ.


ಯುನಿಟ್ ಗಳ ಪ್ರಸರಣ ಹೇಗಿರಲಿದೆ?
ಯುನಿಟ್ ಗಳ ಪ್ರೋಸೆಸ್ ರಿಕ್ವೆಸ್ಟ್ ಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಲಾಗಿದೆ. ಸೆಬಿ. ಎಎಂಸಿಗಳಿಗೆ ನಿಯಮಗಳನ್ನು ನಿಗದಿಪಡಿಸಿದೆ. ಹಕ್ಕುದಾರನು ಹೂಡಿಕೆದಾರ ಪೋರ್ಟ್ ಫೋಲಿಯೋದಲ್ಲಿ ನಾಮಿನಿ / ಜ್ವಾಯಿಂಟ್ ಹೋಲ್ಡರ್ ಆಗಿದ್ದರೆ, ಎಎಂಸಿಗಳು ಇಮೇಜ್ ಬೇಸ್ಡ್ ಪ್ರೊಸೆಸಿಂಗ್ ಮಾಡಬೇಕಾಗುತ್ತದೆ. ಟ್ರಾನ್ಸ್ಮಿಷನ್ ಪ್ರೋಸೆಸ್ ಗಾಗಿ ಸೆಂಟ್ರಲ್ ಹೆಲ್ಪ್ ಡೆಸ್ಕ್ ನಿರ್ಮಿಸಬೇಕಾಗಲಿದೆ. ಟ್ರಾನ್ಸ್ಮಿಷನ್ ಪ್ರೋಸೆಸ್ ನ ಸಂಪೂರ್ಣ ವಿವರ ವೆಬ್‌ಪುಟದಲ್ಲಿ ನೀಡಲಾಗುವುದು. ಎಎಂಸಿಗಳು ಕಾಮನ್ ಟ್ರಾನ್ಸ್ಮಿಷನ್ ರಿಕ್ವೆಸ್ಟ್ ಫಾರ್ಮ್ ಅನ್ನು ನಿರ್ವಹಿಸಬೇಕು. ಎಎಂಸಿಗಳು ಸಾಮಾನ್ಯ ಎನ್‌ಒಸಿ ಫಾರ್ಮ್ ಅನ್ನು ಸಹ ಸಿದ್ಧಪಡಿಸಬೇಕು.