ಮುಂಬೈ: ಹೊಸವರ್ಷದ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ ಮತ್ತು ಹಲವು ಕಂಪನಿಗಳು ತಮ್ಮ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಗಳನ್ನು ನೀಡಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ಸಾರ್ವಜನಿಕ ವಲಯದ ಅತಿದೊಡ್ಡ  ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಹೊಸ ವರ್ಷದಲ್ಲಿ ದೊಡ್ಡ ಉಡುಗೊರೆಯನ್ನೇ ನೀಡಿದೆ. ಸಾಲದ ದರವನ್ನು ಕಡಿತಗೊಳಿಸುವ ಮೂಲಕ ಎಸ್‌ಬಿಐ ಗ್ರಾಹಕರ ಜೇಬಿನ ಮೇಲಿನ ಇಎಂಐ ಹೊರೆಯನ್ನು ಕಡಿಮೆ ಮಾಡಿದೆ.


COMMERCIAL BREAK
SCROLL TO CONTINUE READING

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಸೋಮವಾರ ತನ್ನ ಬಡ್ಡಿದರದಲ್ಲಿ ಶೇ.0.25ರಷ್ಟು ಇಳಿಕೆ ಮಾಡಿದ್ದು, ಬಡ್ಡಿದರ ಶೇ.7.80ಕ್ಕೆ ಇಳಿಸಿದೆ. ಸದ್ಯ ಈ ದರ ಶೇ.8.05ರಷ್ಟಿದ್ದು, ನೂತನ ದರ ಜನವರಿ 1, 2020ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಪ್ರಕಟಿಸಿದೆ.


ಎಸ್‌ಬಿಐನ ಈ ನಿರ್ಧಾರದಿಂದ ಬ್ಯಾಂಕ್ ನ ಗೃಹ ಸಾಲದ ಮೇಲಿನ ಬಡ್ಡಿಯನ್ನೂ ಸಹ ಕಡಿಮೆ ಮಾಡಲಿದೆ ಮತ್ತು ಇಬಿಆರ್ ಆಧಾರದ ಮೇಲೆ ಸಾಲ ತೆಗೆದುಕೊಳ್ಳುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಬಡ್ಡಿ ಪ್ರತಿ ಶೇಕಡಾ 25 ಪೈಸೆ ಕಡಿಮೆಯಾಗಲಿದೆ. ಅಷ್ಟೇ ಅಲ್ಲ ಬ್ಯಾಂಕ್ ಹೊಸ ಗೃಹ ಸಾಲಗಳ ಮೇಲೆ ಇನ್ಮುಂದೆ ಶೇ.7.90 ರಷ್ಟು ವಾರ್ಷಿಕ ಬಡ್ಡಿ ವಿಧಿಸಲಿದೆ. ಸದ್ಯ SBIನ ಗೃಹ ಸಾಲಗಳ ಮೇಲಿನ ಬಡ್ಡಿದರ ಶೇ.8.15ರಷ್ಟಿದೆ.


ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ), ವಸತಿ ಮತ್ತು ಚಿಲ್ಲರೆ ಸಾಲಗಳ ಫ್ಲೋಟಿಂಗ್ ರೇಟ್ಸಗಳನ್ನು ಇಬಿಆರ್‌ಗೆ ಜೋಡಿಸಲು ಎಸ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಮನೆ ಅಥವಾ ಕಾರಿಗೆ ಸಾಲ ತೆಗೆದುಕೊಂಡವರಿಗೆ ಇದು ಹೆಚ್ಚು ಪ್ರಯೋಜನವನ್ನು ನೀಡಲಿದೆ. ಎಸ್‌ಬಿಐನ ಈ ನಿರ್ಧಾರದಿಂದ ನೀವು ಪ್ರತಿ ತಿಂಗಳು ನೀಡುವ ಕಂತುಗಳ ಮೊತ್ತ ಕಡಿಮೆ ಮಾಡಲಿದೆ.


ಈ ಹಿಂದೆ ಡಿಸೆಂಬರ್ ನಲ್ಲಿ MCLR ದರವನ್ನು ಶೇ.0.10ರಷ್ಟು ಇಳಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಈ ದರವನ್ನು ಶೇ. 8 ರಿಂದ ಶೇ.7.90ಕ್ಕೆ ಇಳಿಸಿತ್ತು.  ಹಾಗೂ ನೂತನ ದರ ಡಿಸೆಂಬರ್ 10ರಿಂದ ಜಾರಿಗೆ ಬಂದಿದೆ.


ಕಾರು ಖರೀದಿಸಬೇಕು ಎನ್ನುವರಿಗೆ ಸಂತಸದ ಸುದ್ದಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಕಾರುಗಳನ್ನು ಖರೀದಿಸಲು ಉತ್ತಮ ಕೊಡುಗೆ ನೀಡಿದೆ. ನೀವು ಡಿಸೆಂಬರ್ 31ರವರೆಗೆ ಎಸ್‌ಬಿಐನ ಯೋನೊ ಆ್ಯಪ್ ಮೂಲಕ ಕಾರನ್ನು ಕಾಯ್ದಿರಿಸಿದರೆ, ನಂತರ ನೀವು ಕಾರು ಖರೀದಿಸುವ ವೇಳೆ ಆಕರ್ಷಕ ರಿಯಾಯಿತಿ ಪಡೆಯಬಹುದಾಗಿದೆ. ಜೊತೆಗೆ ಆಟೋ ಸಾಲದ ಮೇಲೆ ಆಕರ್ಷಕ ರಿಯಾಯಿತಿಗಳು ಸಹ ಇರಲಿವೆ.


ಈ ಆಫರ್ ಬಳಸಿ ನೀವು SBI YONO ಆಪ್ ಬಳಸಿ ಮಹಿಂದ್ರಾ ಮರಾಝೋ ಕಾರ್ ಬುಕ್ ಮಾಡಬಹುದು. ಈ ಕಾರಿನ ಬುಕಿಂಗ್ ಮೇಲೆ ನಿಮಗೆ ಸುಮಾರು 1.86 ಲಕ್ಷ ರೂ.ಗಳ ರಿಯಾಯಿತಿ ಸಿಗಲಿದೆ. SBI ವತಿಯಿಂದ ನೀಡಲಾಗುತ್ತಿರುವ ಈ ಕೊಡುಗೆಯ ಜೊತೆಗೆ ನಿಮಗೆ ವಾಹನಕ್ಕೆ ಬೇಕಾಗುವ ಪರಿಕ್ಕರಗಳನ್ನೂ ಸಹ ನೀಡಲಾಗುತ್ತಿದೆ. SBIನ YONO ಆಪ್ ಮೂಲಕ ಒಂದು ವೇಳೆ ನೀವು ಕಾರ್ ಬುಕ್ ಮಾಡಿದರೆ ನಿಮಗೆ 50 ಸಾವಿರ ರೂ.ಗಳ ಪರಿಕ್ಕರಗಳು ಸಹ ಉಚಿತ ಸಿಗಲಿವೆ. ಆದರೆ, ಈ ಕೊಡುಗೆ ಕೇವಲ ಡಿಸೆಂಬರ್ 31ರವರೆಗೆ ಮಾತ್ರ ಇರಲಿದೆ.