ಎಣ್ಣೆ ಏಟಲ್ಲಿ ಸಾಯಿಸ್ತೀನಿ ಎಂದವನೇ ಶವವಾಗಿದ್ದ...!
ಶ್ರೀಧರ್ (34) ಎಂಬಾತನನ್ನ ಕೊಚ್ಚಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿತ್ತು. ಸದ್ಯ ಆರೋಪಿಗಳಾದ ಆಂಧ್ರಪ್ರದೇಶ ಮೂಲದ ವೀರಾಂಜನೇಯಲು, ಗೋವರ್ಧನ್ ಹಾಗೂ ಬುಡ್ಡಪ್ಪ ಎಂಬಾತನನ್ನ ಬಂಧಿಸಲಾಗಿದೆ. ಫೆಬ್ರುವರಿ 4ರಂದು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಸುಟ್ಟ ಸ್ಥಿತಿಯಲ್ಲಿ ಶ್ರೀಧರ್ ಶವ ಪತ್ತೆಯಾಗಿತ್ತು.
ಬೆಂಗಳೂರು : ಎಣ್ಣೆ ಮತ್ತಲ್ಲಿ ಕೊಲ್ಲುವ ಮಾತನಾಡಿದ್ದಕ್ಕೆ ಸ್ನೇಹಿತನನ್ನೆ ಕೊಂದಿದ್ದ ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀಧರ್ (34) ಎಂಬಾತನನ್ನ ಕೊಚ್ಚಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿತ್ತು. ಸದ್ಯ ಆರೋಪಿಗಳಾದ ಆಂಧ್ರಪ್ರದೇಶ ಮೂಲದ ವೀರಾಂಜನೇಯಲು, ಗೋವರ್ಧನ್ ಹಾಗೂ ಬುಡ್ಡಪ್ಪ ಎಂಬಾತನನ್ನ ಬಂಧಿಸಲಾಗಿದೆ. ಫೆಬ್ರುವರಿ 4ರಂದು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಸುಟ್ಟ ಸ್ಥಿತಿಯಲ್ಲಿ ಶ್ರೀಧರ್ ಶವ ಪತ್ತೆಯಾಗಿತ್ತು.
ಯಲಹಂಕದಲ್ಲಿ ವಾಸವಿದ್ದ ಶ್ರೀಧರ್ ಫಿಸಿಯೋ ಥೆರಪಿಸ್ಟ್ ಆಗಿದ್ದ. ಮದ್ಯಪಾನಕ್ಕೆ ದಾಸನಾಗಿದ್ದರಿಂದ ಬಾರ್ ನಲ್ಲಿ ವೀರಾಂಜನೇಯಲು ಪರಿಚಯವಾಗಿತ್ತು. ಮದ್ಯದ ಅಮಲಿನಲ್ಲಿ ಶ್ರೀಧರ್ ಒಮ್ಮೆ ವೀರಾಂಜನೇಯಲುಗೆ 'ನಿನ್ನ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿಬಿಡ್ತೀನಿ' ಎಂದಿದ್ದ. ಇಬ್ಬರ ನಡುವೆ ಗಲಾಟೆ ನಡೆದು ಒಂದು ತಿಂಗಳು ಕಳೆಯುವಷ್ಟರಲ್ಲಿ ಸ್ಕೆಚ್ ಹಾಕಿದ್ದ ವೀರಾಂಜನೇಯ ತನ್ನ ಸ್ನೇಹಿತರಾದ ಗೋವರ್ಧನ್, ಬುಡ್ಡಪ್ಪನ ಜೊತೆ ಸೇರಿ ಲಕ್ಷ್ಮೀಪುರದ ಖಾಲಿ ತೋಪಿನಲ್ಲಿ ಶ್ರೀಧರನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಮೂವರೂ ಸೇರಿ ಅಮಲಿನಲ್ಲಿದ್ದ ಶ್ರೀಧರನನ್ನ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು.
ಇದನ್ನೂ ಓದಿ-Jr NTR:ಈ ನಟಿಯ ಹುಟ್ಟು ಹಬ್ಬಕ್ಕೆ ಜೂನಿಯರ್ ಎನ್‌ಟಿಆರ್ ಕಡೆಯಿಂದ ಗಿಫ್ಟ್!
ಫೆಬ್ರುವರಿ 7ರಂದು ಸುಟ್ಟ ಸ್ಥಿತಿಯಲ್ಲಿದ್ದ ಶವ ಕಂಡ ಜಮೀನಿನ ಮಾಲೀಕ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅಪರಿಚಿತ ಶವ ಪತ್ತೆ ಎಂದು ಪ್ರಕರಣ ದಾಖಲಾಗಿತ್ತು. ಫೆಬ್ರುವರಿ 9ರಂದು ಮೃತನ ಕಿವಿಯಲ್ಲಿದ್ದ ಓಲೆ, ಮೈ ಮೇಲೆ ಸುಟ್ಟ ಸ್ಥಿತಿಯಲ್ಲಿದ್ದ ಬಟ್ಟೆಯನ್ನ ಮೃತನ ಸಹೋದರ ಗುರುತಿಸಿದ್ದರಿಂದ ಸತ್ತವನು ಶ್ರೀಧರ್ ಎಂಬುದು ಗೊತ್ತಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸೋಲದವೇನಹಳ್ಳಿ ಠಾಣಾ ಇನ್ಸ್‌ಪೆಕ್ಟರ್ ಗೌತಮ್.ಜೆ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿ ಬುಡ್ಡಪ್ಪನನ್ನ ಬಂಧಿಸಿದ್ದರು. ಬಳಿಕ ನೀಡಿದ ಮಾಹಿತಿ ಮೇಲೆ ಸದ್ಯ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ವೀರಾಂಜನೇಯಲು ಗೋವರ್ಧನನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ-ಇಲ್ಲಿದೆ ನೋಡಿ ಕಬ್ಜ ಚಿತ್ರದಲ್ಲಿ ನಟಿಸಿರುವ ಕಲಾವಿದರ ಲಿಸ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.