ನವದೆಹಲಿ:ಇತ್ತೀಚಿಗೆ ತಮಿಳುನಾಡಿನ ರಾಜ್ಯಪಾಲರು ಪತ್ರಕರ್ತೆಯ ಕೆನ್ನೆ ಸವರಿ ಭಾರಿ ವಿವಾದಕ್ಕೆ ಕಾರಣವಾಗಿದ್ದರು.ಅನಂತರ ರಾಜ್ಯಪಾಲರ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅವರು ಪತ್ರಕರ್ತೆಯ ಕ್ಷಮೆಯನ್ನು ಕೇಳಿದ್ದರು. 


COMMERCIAL BREAK
SCROLL TO CONTINUE READING

ಈಗ ರಾಜಪಾಲರ ಕ್ಷಮೆಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಬಿಜೆಪಿ ನಾಯಕ ಎಸ್ ವಿ ಶೇಖರ್ "ಪತ್ರಕರ್ತೆಯ ಕೆನ್ನೆಯ ಸವರಿದ್ದಕ್ಕೆ ಅವರು ಪಿನಾಯಿಲ್ ನಿಂದ ಕೈ ಅವರು ಪಿನಾಯಿಲ್ ನಿಂದ ಕೈ ತೊಳೆದುಕೊಳ್ಳಬೇಕಾಗಿತ್ತು ಎಂದು ಡಿಲಿಟ್ ಮಾಡಿರುವ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮುಂದುವರೆದು ಪತ್ರಕರ್ತೆಯ ಪ್ರಕರಣವನ್ನು ಪ್ರಸ್ತಾಪಿಸುತ್ತಾ "ದೊಡ್ಡ ವ್ಯಕ್ತಿಗಳ ಜೊತೆ ಮಲಗದ ಹೊರತು ಪತ್ರಕರ್ತರು ಅಥವಾ ಆಂಕರ್ ಗಳಾಗಲು ಸಾಧ್ಯವಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಅದಕ್ಕೆ ಈ ಮಹಿಳೆಯೂ ಕೂಡ ಹೊರತಲ್ಲ ಎಂದು ಅವರು ಡಿಲಿಟ್ ಮಾಡಿರುವ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 


ನಂತರ ಇದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ  ಅವರು ಪೂರ್ಣ ಪ್ರಕರಣವನ್ನು ಓದದೆ ಇದನ್ನು ಪೋಸ್ಟ್ ಮಾಡಲಾಗಿದೆ.ಇದು ಆಕಸ್ಮಿಕವಾಗಿ ಸಂಭವಿಸಿದ್ದು ಎಂದು ಹೇಳಿ  ಕ್ಷಮೆಯಾಚಿಸಿದ್ದಾರೆ.