Viral Video: ಭಂಡಾರ ಏರುವ ಸಮಯ… ಬಸವನ ಮೇಲೆ ದೈವದ ಆವಾಹನೆ: ದೈವಿಕ ವಿಡಿಯೋ ನೋಡಿ
Viral Video: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ಕೆಲಭಾಗಗಳಲ್ಲಿ ದೈವಾರಾಧನೆಗೆ ಮಹತ್ವದ ಸ್ಥಾನಮಾನವಿದೆ. ಇಲ್ಲಿನ ಜನರು ದೇವರಷ್ಟೇ ದೈವಗಳನ್ನು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ. ದೈವ ನುಡಿದ ಮಾತುಗಳು ಇಲ್ಲಿನ ಜನರಿಗೆ ವೇದವಾಕ್ಯ ಎನ್ನಬಹುದು.
Viral Video: ಕರಾವಳಿ ಎಂದಾಕ್ಷಣ ನೆನಪಾಗುವುದು ಅಲ್ಲಿನ ಸಂಸ್ಕೃತಿ, ಆಚಾರ ವಿಚಾರ, ಪದ್ಧತಿಗಳು, ಊಟೋಪಚಾರ, ಹೀಗೆ ಹತ್ತು ಹಲವಾರು ವಿಚಾರಗಳು. ಆದರೆ ಇವೆಲ್ಲವನ್ನೂ ಮೀರಿದ ಶಕ್ತಿ ಆ ಮಣ್ಣಿನಲ್ಲಿ ನೆಲೆಸಿದೆ. ಪ್ರಕೃತಿ ಆರಾಧನೆ ಎಂಬುದು ಇಲ್ಲಿನ ಜನರ ಜೀವಾಳ. ಇಲ್ಲಿನ ಜನರು ದೇವರ ಹೆಸರಿನಲ್ಲಿ ಪ್ರಕೃತಿಯನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಆ ಪ್ರಕೃತಿಯಲ್ಲಿ ದೈವಾರಾಧನೆ ಎಂಬುದು ವಿಶೇಷ ನಂಬಿಕೆ. ಈ ದೈವಾರಾಧನೆ ಇಲ್ಲಿನ ಜನರ ಉಸಿರು ಎನ್ನಬಹುದು.
ಇದನ್ನೂ ಓದಿ: Mangal Gochar 2023: ಕೆಲವೇ ಗಂಟೆಗಳಲ್ಲಿ ಮಂಗಳ ಪಥ ಬದಲಾಯಿಸುತ್ತಿದ್ದಂತೆ ಈ ಜನರ ಜೀವನದಲ್ಲಿ ನಡೆಯುತ್ತೆ ಆಘಾತಕಾರಿ ಘಟನೆಗಳು!
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ಕೆಲಭಾಗಗಳಲ್ಲಿ ದೈವಾರಾಧನೆಗೆ ಮಹತ್ವದ ಸ್ಥಾನಮಾನವಿದೆ. ಇಲ್ಲಿನ ಜನರು ದೇವರಷ್ಟೇ ದೈವಗಳನ್ನು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ. ದೈವ ನುಡಿದ ಮಾತುಗಳು ಇಲ್ಲಿನ ಜನರಿಗೆ ವೇದವಾಕ್ಯ ಎನ್ನಬಹುದು.
ಇನ್ನು ಕೆಲವೊಂದು ಭಾಗಗಳಲ್ಲಿ ದೈವಗಳಿಗೆ ಬಸವನನ್ನು ಸಮರ್ಪಣೆ ಮಾಡುವ ವಾಡಿಕೆ ಇದೆ. ದೇವರಿಗೆ ಪ್ರಾಣಿಗಳನ್ನು ಸಮರ್ಪಿಸಿದಂತೆ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಗಳಿಗೆ ಬಸವನನ್ನು ಸಮರ್ಪಣೆ ಮಾಡಲಾಗುತ್ತದೆ. ಈ ಬಸವನನ್ನು ಸಾಕಲೆಂದು ಕೆಲವೊಂದು ಮನೆತನಗಳಿರುತ್ತವೆ. ಅಲ್ಲಿನ ಜನರು ಅದಕ್ಕೆ ಬೇಕಾದ ಆಹಾರಗಳನ್ನು ನೀಡುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ದೈವಕ್ಕೆ ಬಿಟ್ಟ ಬಸವ ಆ ದೈವಸ್ಥಾನವಿರುವ ಊರಿನಲ್ಲಿ ಸುತ್ತಾಡಿಕೊಂಡಿರುತ್ತದೆ. ಆದರೆ ಆ ದೈವಸ್ಥಾನದ ಜಾತ್ರೆ ಅಥವಾ ದೈವಾರಾಧನೆಯ ಸಂದರ್ಭದಲ್ಲಿ ಎಲ್ಲಿದ್ದರೂ ಸಹ ಆ ಬಸವ ಸ್ಥಳಕ್ಕೆ ಬರುತ್ತದೆ. ಇದು ಈ ಮಣ್ಣಿನ ಪವಾಡಕ್ಕೆ ಮತ್ತೊಂದು ಸಾಕ್ಷಿ ಎನ್ನಬಹುದು.
ಇದೀಗ ಇಲ್ಲಿ ತೋರಿಸಿರುವ ವಿಡಿಯೋವನ್ನು ಕಣ್ತುಂಬಿಕೊಳ್ಳಿ. ಇದು ಪಜೀರು ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ದೃಶ್ಯ. ದೈವದ ಭಂಡಾರ ಕೊಡಿಯಡಿ ಏರುತ್ತಿದ್ದಂತೆ ಅಲ್ಲಿಯ ಬಸವನಿಗೆ ದೈವದ ಆವೇಶವಾಗಿದೆ. ಕಡೆಗೆ ದೈವದ ತೀರ್ಥವನ್ನು ಬಸವನ ಮೇಲೆ ಪ್ರೋಕ್ಷಣೆ ಮಾಡುತ್ತಿದ್ದಂತೆ ಸಾಮಾನ್ಯ ಸ್ಥಿತಿಗೆ ಮರಳಿದೆ.
ಇದನ್ನೂ ಓದಿ: Upasana Kamineni: ಆಸ್ಕರ್ ಪ್ರದಾನ ದಿನ ಬೆಳಗ್ಗೆ ಏಳುತ್ತಿದ್ದಂತೆ ರಾಮ್ ಚರಣ್ ಪತ್ನಿ ಉಪಾಸನ ಮಾಡಿದ್ದೇನು ಗೊತ್ತಾ?
ಈ ವಿಡಿಯೋವನ್ನು ಫೇಸ್ಬುಕ್ ಪೇಜ್, “ದೈವರಾಜ ಬಬ್ಬುಸ್ವಾಮಿ ಹೊಸಬೆಟ್ಟು” ಹಂಚಿಕೊಂಡಿದ್ದು, ಇದುವರೆಗೆ 80 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.