ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಈಗ ಮುಂಬೈ ನ ಬೀದಿ ಮಾರಾಟಗಾರ ಇಡ್ಲಿಯನ್ನು ತಯಾರಿಸಲು ಶೌಚಾಲಯದ ನೀರನ್ನು ಬಳಸುತ್ತಿದ್ದಾನೆ. ಬೋರಿವಲಿ ರೈಲ್ವೆ ನಿಲ್ದಾಣದಲ್ಲಿನ ಶೌಚಾಲಯದ ನೀರನ್ನು ಆಹಾರ ತಯಾರಿಸಲು ಬಳಸಿದ್ದಾನೆ ಎನ್ನಲಾಗಿದೆ.



COMMERCIAL BREAK
SCROLL TO CONTINUE READING

ವೈರಲ್ ಆಗಿರುವ 45 ಸೆಕೆಂಡ್ ಗಳ ವಿಡಿಯೋ ದಲ್ಲಿ ಶೌಚಾಲಯದಿಂದ ನೀರನ್ನು ತರುತ್ತಿರುವ ದೃಶ್ಯವು ಸೆರೆಯಾಗಿದೆ.ಈಗ ಈ ಸಂಗತಿ ಆಹಾರ ಮತ್ತು ಡ್ರಗ್ ಆಡಳಿತ ವಿಭಾಗದ ಗಮನಕ್ಕೆ ಬಂದಿದ್ದು, ಅವರು ಈ ವಿಚಾರವಾಗಿ ತನಿಖೆಯನ್ನು ಆರಂಭಿಸಿದ್ದಾರೆ.ಈಗ ಸಾರ್ವಜನಿಕರಿಗೂ ಕೂಡ ಅಂತಹ ಕಲುಷಿತ ನೀರನ್ನು ಬಳಸಕೂಡದು ಎಂದು ಸೂಚನೆ ನೀಡಿದೆ.


ಈಗ ಘಟನೆಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಂಬೈ ಎಫ್ಡಿಎ ಶಾಖೆ  ಅಧಿಕಾರಿ ಶೈಲೇಶ್ ಯಾದವ್ " ಈ ವಿಡಿಯೋ ನಮ್ಮ ಗಮನಕ್ಕೆ ಬಂದಿದ್ದು, ನಾವು ಅವನ ವಿರುದ್ಧ ಹಾಗೂ  ಈ ರೀತಿ ಬಳಸುವ ಇತರರ ವಿರುದ್ಧ ತನಿಖೆ ನಡೆಸುತ್ತೇವೆ, ಇಂತಹ ನೀರು ಬಳಕೆಗೆ ಆರೋಗ್ಯಕರವಲ್ಲ " ಎಂದು ಹೇಳಿದ್ದಾರೆ.


"ವ್ಯಕ್ತಿಯು ಸಿಕ್ಕಿಬಿದ್ದಾಗ, ಅವರ ಪರವಾನಗಿ ಪತ್ರವನ್ನು  ಪರಿಶೀಲಿಸಲಾಗುವುದು ಮತ್ತು ಯಾವುದೇ ಸ್ಯಾಂಪಲ್  ಕಂಡುಬಂದರೆ, ಅದನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಯಾಧವ್ ಹೇಳಿದರು.