ನವದೆಹಲಿ : ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಸಂಸತ್ತಿನಲ್ಲಿ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಂಸದೆ ಮೊಯಿತ್ರಾ,  ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದ ರಾಮ್ ಮೋಹನ್ ನಾಯ್ಡು ಕಿಂಜರಾಪು ಮಾತನಾಡುವಾಗ ಅವರು 'ಹರಾ..' ಎಂಬ ಹಿಂದಿಯಲ್ಲಿ ಹೇಳುತ್ತಾರೆ. ಎಂಪಿ ಮೊಯಿತ್ರಾ ಅವರು ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸದನದದಲ್ಲಿ ವಾಗ್ದಾಳಿ ನಡೆಸಿದರು. ಎಂಪಿ ಮೊಯಿತ್ರಾ ಬಳಸಿರುವ ಶಬ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ. 


ಪ್ಲಾಸ್ಟಿಕ್ ಬಾಟಲಿ ಮರುಬಳಕೆಯಿಂದ ತಯಾರಿಸಿದ ಜಾಕೆಟ್ ಧರಿಸಿದ ಪ್ರಧಾನಿ ಮೋದಿ!


ಎಂಪಿ ಮೊಯಿತ್ರಾ ಹೇಳಿಕೆಗೆ ಎಂಪಿ ಹೇಮಾ ಮಾಲಿನಿ ಪ್ರತಿಕ್ರಿಯೆ


ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಹಾಗೂ ನಟಿ ಹೇಮಾ ಮಾಲಿನಿ ಅವರು ಸಂಸತ್ತಿನ ಒಳಗೆ ಇಂತಹ ಪದಗಳನ್ನು ಬಳಸಬಾರದು ಮತ್ತು ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.


ಇನ್ನು ಮುಂದುವರೆದು ಮಾತನಾಡಿದ ಸಂಸದೆ ಹೇಮಾ ಮಾಲಿನಿ, ಅವರು ತಮ್ಮ ನಾಲಿಗೆಯನ್ನು ನಿಯಂತ್ರಿಸಬೇಕು ಮತ್ತು ಅತಿಯಾದ ಉತ್ಸಾಹ ಮತ್ತು ಭಾವನಾತ್ಮಕತೆಗೆ ಒಳಗಾಗಬಾರದು. ಸಂಸತ್ತಿನ ಪ್ರತಿಯೊಬ್ಬ ಸದಸ್ಯರು ಗೌರವಾನ್ವಿತ ವ್ಯಕ್ತಿ" ಎಂದು ಹೇಳಿದರು.


ಇದನ್ನೂ ಓದಿ : ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.